ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲಲ್ಲೇ ಕಸದ ರಾಶಿಗೆ ಬೆಂಕಿ

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮಹದೇವಪುರ: ಇಲ್ಲಿನ ಮಾರತ್‌­ಹಳ್ಳಿ ರಿಂಗ್‌ರಸ್ತೆಯಲ್ಲಿ ಶುಕ್ರವಾರ ರಸ್ತೆ ಬದಿಯಲ್ಲಿ ಬಿಬಿಎಂಪಿ ಕಸದ ಲಾರಿ­ಗಳು ಸುರಿದ ಕಸದ ರಾಶಿಗೆ ಬೆಂಕಿ ಹಚ್ಚ­ಲಾಗಿತ್ತು. ಸಂಜೆಯವರೆಗೆ ಉರಿಯು­ತ್ತಲೇ ಇದ್ದ ಕಸದ ರಾಶಿಯಿಂದ ದಟ್ಟ ಹೊಗೆ ಹೊರಬರುತ್ತಿತ್ತು.

ಮಾರತ್‌ಹಳ್ಳಿಯಿಂದ ಸಿಲ್ಕ್‌­ಬೋರ್ಡ್‌ ಕಡೆಗೆ ಹೋಗುವ ರಿಂಗ್‌ ರಸ್ತೆಯ ಎಡಭಾಗದಲ್ಲಿ ರಾಶಿ ರಾಶಿ ಕಸವನ್ನು ಸುರಿಯಲಾಗಿದ್ದು, ದೊಡ್ಡನೆ­ಕ್ಕುಂದಿ, ವರ್ತೂರು ಹಾಗೂ ಮಾರತ್‌­ಹಳ್ಳಿ ವಾರ್ಡ್‌ನಲ್ಲಿನ ಕಸವನ್ನು ದಿನವೂ ತಂದು ಸುರಿಯಲಾಗುತ್ತಿದೆ. ಪಕ್ಕ­ದ­ಲ್ಲಿಯೇ ಹರಿಯುವ ಕೆರೆಯ ನೀರಿಗೂ ಕಸ ಚೆಲ್ಲಲಾಗುತ್ತಿದೆ. ಇದರಿಂದಾಗಿ ದುರ್ನಾತ ಹೊರಬರು­ತ್ತಿದೆ. ರಸ್ತೆ ಬದಿ­ಮೂಗು ಮುಚ್ಚಿಕೊಂಡು ದಿನಗಳನ್ನು ಕಳೆಯುವಂತಾಗಿದೆ.

ಮಂಡೂರಿಗೆ ಕಸವನ್ನು ಸುರಿಯು­ವು­ದನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ  ರಸ್ತೆ­ಬದಿಯಲ್ಲಿ ದಿನವೂ ಬೆಳ­ಗಾಗು­ತ್ತಲೇ ಕಸದ ರಾಶಿ ಬಂದು ಬೀಳುತ್ತಿದೆ. ಅಲ್ಲದೆ ಕಸದ ರಾಶಿಗೆ ಬೆಂಕಿ ಹಚ್ಚ­ಲಾಗುತ್ತಿದೆ. ಹೆಚ್ಚಾಗಿ ಪ್ಲಾಸ್ಟಿಕ್‌ ಕಸದ ಸುಟ್ಟ ವಾಸನೆ ಬರು­ತ್ತದೆ. ಹೀಗಾಗಿ ರಸ್ತೆಯಲ್ಲಿ ಸಂಚರಿಸು­ವುದೇ ಹಿಂಸೆ ಎಂದು ಸ್ಥಳೀಯ ಮುನ್ನೆಕೊಳ್ಳಾಲದ ನಿವಾಸಿ ಡಿ.ಸುರೇಶ ದೂರಿದರು.

ಈ ಬಗ್ಗೆ ಬಿಬಿಎಂಪಿಗೆ ದೂರು ಸಲ್ಲಿಸಿದರೆ, ಈ ಗ್ರಾಮ­ದಲ್ಲಿ ಸಂಗ್ರಹ­ಗೊಳ್ಳುವ ಕಸ­ವನ್ನು ಇಲ್ಲಿ ಅನಿವಾ­ರ್ಯವಾಗಿ  ಸುರಿಯ­ಲಾಗು­ತ್ತಿದೆ. ಕಸ­ವನ್ನು ವಿಂಗಡಿಸಲು ವಾರ್ಡ್‌­ನಲ್ಲಿ ಸ್ಥಳ ಗೊತ್ತು­ಪಡಿಸಿದ ಮೇಲೆ ಇಲ್ಲಿ ಕಸ ಸುರಿಯು­ವುದನ್ನು ನಿಲ್ಲಿಸಲಾ­ಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT