ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆ ಅಣಕಿಸುವ ಜಾಹೀರಾತು: ಬಿಜೆಪಿ ಕ್ಷಮೆಗೆ ಎಎಪಿ ಆಗ್ರಹ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಅವರ ಭಾವಚಿತ್ರಕ್ಕೆ ಹೂವಿನಹಾರ ಹಾಕಿ ಅಣಕಿಸುವ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕ­ಟಿಸಿರುವ ಬಿಜೆಪಿಯನ್ನು ಶುಕ್ರವಾರ ಇಲ್ಲಿ ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ (ಎಎಪಿ), ಕೇಸರಿ ಪಕ್ಷವು ‘ಹುತಾತ್ಮರ ದಿನ’ 2ನೇ ಗಾಂಧಿ­ಯನ್ನೂ ಕೊಂದಿದ್ದು, ತಕ್ಷಣ ಈ ಬಗ್ಗೆ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ.

ಈ ಜಾಹೀರಾತು ಚುನಾವಣಾ ಆಯೋ­­ಗದ ಮಾರ್ಗಸೂಚಿಗೆ ವಿರುದ್ಧ­ವಾಗಿದೆ. ಆದ್ದರಿಂದ ಆಯೋಗ ತಕ್ಷಣ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳ­ಬೇಕು ಎಂದು ಎಎಪಿ ಒತ್ತಾಯಿಸಿದೆ. ಅಲ್ಲದೆ, ‘ಗಾಂಧೀಜಿ ಬಗ್ಗೆ ಬಿಜೆಪಿ ಮಾತ­ನಾಡು­ವಾಗ  ನಾಥೂರಾಂ ಗೋಡ್ಸೆ ಸಿದ್ಧಾಂತ­ ಅನುಸರಿಸು­ತ್ತಿದೆ’ ಎಂದೂ ಟೀಕಿಸಿದೆ.

ಗಾಂಧೀಜಿ ಹತ್ಯೆಯಾದ ಜ.30ರಂದು ಬಿಜೆಪಿ ಎರಡನೇ ಗಾಂಧಿ­ಯನ್ನೂ ಕೊಂದಿ-ರುವುದು ಸಂಕು­ಚಿತ ಮನೋಭಾವ ಪ್ರತಿಬಿಂಬಿಸಿದೆ. ಈ ಜಾಹೀ-ರಾತು ಕೀಳು ಅಭಿರುಚಿ­ಯ-­ದ್ದು ಎಂದು ಎಎಪಿಯ ಸಂಜಯ್‌ಸಿಂಗ್‌ ಟೀಕಿಸಿದ್ದಾರೆ.

ಇದಕ್ಕೂ ಮುನ್ನ ಟ್ವಿಟರ್‌ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಬಿಜೆಪಿ­ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 1948ರಲ್ಲಿ ಗಾಂಧೀಜಿಯನ್ನು ಗೋಡ್ಸೆ ಕೊಂದರೆ, ಬಿಜೆಪಿ ತನ್ನ ಜಾಹೀರಾತಿನಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿ­ಗಾರ-ನನ್ನು ಕೊಂದಿದೆ. ಈ ಬಗ್ಗೆ ಕ್ಷಮೆ-ಯಾಚಿಸು-ವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT