ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್‌ ಯಾತ್ರಿಗಳಿಗೆ ಹೆಚ್ಚಿನ ಸೌಲಭ್ಯ: ಕೇಂದ್ರ ಚಿಂತನೆ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಜ್‌ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳ ಸೌಲಭ್ಯ  ಸುಧಾರಿಸಲಾಗುವುದು. ವಾರ್ಷಿಕ ಯಾತ್ರೆಗೆ ಭಾರತದ ಕೋಟಾವನ್ನು ಶೇ 20ರಷ್ಟು ಕಡಿತ ಮಾಡಿರುವ ಸೌದಿ ಅರೇಬಿಯಾದ ತೀರ್ಮಾನದ ಬಗ್ಗೆ ಅಲ್ಲಿನ ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು   ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ಅಖಿಲ ಭಾರತ ವಾರ್ಷಿಕ ಹಜ್‌ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಶ್ರೀನಗರ ವಿಮಾನ ನಿಲ್ದಾಣ ದಿಂದ ಹಜ್‌ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿ­ಗಳಿಗೆ ಏರ್‌ ಇಂಡಿಯ ವಿಮಾನಯಾನ ಸಂಸ್ಥೆ ₨1.54 ಲಕ್ಷ ಟಿಕೆಟ್‌ ದರ ವಿಧಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ದೇಶದ ಇತರ ವಿಮಾನ ನಿಲ್ದಾಣಗಳಿಂದ ಯಾತ್ರೆ ಕೈಗೊಳ್ಳುವವರಿಗೆ ₨62,800 ದರ ವಿಧಿಸಲಾಗುತ್ತಿದೆ.

ಹಜ್‌ ಯಾತ್ರಿಗಳಿಗೆ ವಸತಿ ಸೌಲಭ್ಯದ್ದೇ ದೊಡ್ಡ ಸಮಸ್ಯೆ. ಇದಕ್ಕೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕಿದೆ. ಮೆಕ್ಕಾ ಮತ್ತು ನೆರೆಯ ಸ್ಥಳಗಳಲ್ಲಿ ಭಾರತದ ಯಾತ್ರಿ­ಗಳಿಗೆ ಸರ್ಕಾರ­­ದಿಂದ ವಸತಿ ಸೌಲಭ್ಯ ಒದಗಿಸುವ ಬಗ್ಗೆ ಆಲೋಚನೆ ನಡೆಸ­ಲಾಗು­ವುದು ಎಂದರು.

ಸೌದಿ ಸರ್ಕಾರದ ನೆರವಿನೊಂದಿಗೆ ಮೆಕ್ಕಾ ಸುತ್ತಮುತ್ತ ಕೆಲವು ಸಂಕೀರ್ಣಗಳನ್ನು ಅಭಿವೃದ್ಧಿ­ಪಡಿಸಿ ಅವುಗಳನ್ನು ಹಜ್‌ ಯಾತ್ರಿ­ಗಳು ಮೂರು ತಿಂಗಳು ಬಳಸ­ಬಹುದು. ಉಳಿದ ಒಂಬತ್ತು ತಿಂಗಳ ಅವಧಿ­­ಯಲ್ಲಿ ಉಮ್ರಾ ಮತ್ತು ಜಿಯಾರತ್‌ಗೆ ತೆರಳು­ವವರು ಬಳಸುವ ವ್ಯವಸ್ಥೆ ಮಾಡಬೇಕಿದೆ ಎಂದರು.

ಸ್ವಾತಂತ್ರ್ಯಕ್ಕೂ ಮೊದಲು ಭಾರತದ ಬಹಳಷ್ಟು ಸ್ವತ್ತುಗಳು ಮೆಕ್ಕಾ, ಮದೀನಾ­ಗಳಲ್ಲಿ ಇದ್ದವು. ಆದರೆ ಅವುಗಳು ಈಗಿಲ್ಲ.

ಈ ಬಗ್ಗೆ ನಾವು ವಿಚಾರಣೆ ನಡೆಸಬೇಕಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT