ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ವರ್ಷಗಳಲ್ಲಿ 62 ಮದುವೆಯಾದ 35ರ ಭೂಪ

Last Updated 5 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಈತನಿಗೆ 35 ವರ್ಷ. 10 ವರ್ಷಗಳಲ್ಲಿ 62 ಯುವತಿ­ಯರನ್ನು ಮದು­­ವೆಯಾ­ಗಿದ್ದಾನೆ! ವಾಕಿ­ಟಾಕಿ ಹಿಡಿದು ರೈಲ್ವೆ ಟಿಕೆಟ್‌ ತಪಾಸ­ಣಾಧಿ­ಕಾರಿಯಂತೆ (ಟಿಟಿಇ) ಪೋಸ್‌ ನೀಡುತ್ತ ಎಲ್ಲರ ಕಣ್ಣಿಗೆ ಮಣ್ಣೆರಚು­ತ್ತಿದ್ದ ಈ ಮಹಾ­ಮೋಸಗಾರ ಈಗ ಪೊಲೀಸರ ಅತಿಥಿ.

ಮೊಹಮ್ಮದ್‌ ನಿಜಾಮ್‌ ಅಲಿ­ಯಾಸ್‌ ಸುಜಾನ್‌ ಅಲಿಯಾಸ್‌ ರಾಜ್‌­ಕುಮಾರ್‌ ಎಂಬ ವಂಚಕನ ಬಗ್ಗೆ ಹೇಳು­ವುದಕ್ಕೆ ಹೀಗೆ ಎಷ್ಟೋ ಸಂಗತಿಗಳು ಇವೆ. 2004ರಿಂದಲೂ ಈತ ಅನೇಕ ಯುವ­­ತಿ­­ಯರನ್ನು ಮದು­ವೆಯಾಗಿ ಪಂಗ­­ನಾಮ ಹಾಕಿದ್ದಾನೆ. ಕೆಲಸ ಕೊಡಿ­ಸು­­ವು­ದಾಗಿ ನಂಬಿಸಿ ಅದೆಷ್ಟೋ ಯುವಕ­ರನ್ನೂ ಬೇಸ್ತು­ಬೀಳಿಸಿದ್ದಾನೆ.

ಈತನ ವಂಚನೆ ಜಾಲ ಭೇದಿಸಲು ವಿಶೇಷ ಪೊಲೀಸ್‌ ತಂಡ ರಚಿಸ­ಲಾ­ಗಿತ್ತು. ಉತ್ತರ ಬಿಹಾರದ ವೈಶಾಲಿ ಜಿಲ್ಲೆಯ ಬಾಲಿಗಾಂವ್‌್ ಪೊಲೀಸರು ಕೊನೆಗೂ ಈತನನ್ನು ವಶಕ್ಕೆ ಪಡೆಯು­ವಲ್ಲಿ ಯಶಸ್ವಿಯಾಗಿದ್ದಾರೆ.

‘ಈತನನ್ನು ಬಂಧಿಸಿದ್ದೇ ತಡ 20ರ ವಯೋಮಾನದ ಕನಿಷ್ಠ 15 ಯುವ­ತಿ­­ಯರು ಠಾಣೆಗೆ ಬಂದು ತಾವು ಈತನ ಪತ್ನಿಯರು ಎಂದು ಹೇಳಿ­ಕೊಂಡಾಗ ನಾವು ದಂಗಾಗಿಹೋ­ದೆವು’ ಎಂದು ಬಾಲಿಗಾಂವ್‌ ಠಾಣಾ­ಧಿಕಾರಿ ರಾಜ್‌­ಕುಮಾರ್‌ ಪಾಸ್ವಾನ್‌ ಹೇಳಿದ್ದಾರೆ. ‘ಈತನಿಗೆ ವಾಕಿಟಾಕಿ ಹಾಗೂ ಟಿಟಿಇ ಸಮವಸ್ತ್ರ ಹೇಗೆ ಸಿಕ್ಕಿತು ಎನ್ನುವುದನ್ನು ತನಿಖೆ ಮಾಡ­ಬೇಕಿದೆ’ ಎಂದು ವೈಶಾಲಿ ಎಸ್‌ಪಿ ಸುರೇಶ್‌ ಚೌಧರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT