ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್‌: ನಾಲ್ವರ ಸಾವು

Last Updated 25 ಜೂನ್ 2014, 19:30 IST
ಅಕ್ಷರ ಗಾತ್ರ

ಛಪರಾ/ಪಟ್ನಾ (ಪಿಟಿಐ): ದೆಹಲಿ­ಯಿಂದ ಅಸ್ಸಾಂನ ದಿಬ್ರುಗಡಕ್ಕೆ ಹೋಗು­­ತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ 12 ಬೋಗಿಗಳು   ಹಳಿ ತಪ್ಪಿದ ಪರಿಣಾಮ ಕನಿಷ್ಠ ನಾಲ್ವರು  ಮೃತ­ಪಟ್ಟು, 23 ಜನರು ಗಾಯಗೊಂ­ಡಿ­ರುವ ಘಟನೆ  ಬಿಹಾರದ ಸರನ್‌ ಜಿಲ್ಲೆಯಛಪರಾ ಬಳಿ ಬುಧವಾರ ನಡೆದಿದೆ.

ಇದರ ಹಿಂದೆ ನಕ್ಸಲೀಯರ ಕೈವಾಡ ಏನಾದರೂ ಇದೆಯೇ ಎನ್ನುವ ಅನು­ಮಾನ ಕೂಡ ವ್ಯಕ್ತವಾಗಿದೆ. ಇನ್ನೊಂದೆಡೆ, ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ಸ್ಫೋಟ­ದಿಂದಾಗಿ ಸರಕು ಸಾಗಣೆ ರೈಲಿನ ಎಲ್ಲ 18 ಬೋಗಿಗಳು ಹಳಿ ತಪ್ಪಿದ ಘಟನೆ ಕೂಡ ನಡೆದಿದೆ. ಈ ಪ್ರಕರಣದ ಹಿಂದೆಯೂ ನಕ್ಸಲೀಯರ ಕೃತ್ಯ ಇರ­ಬ­ಹುದು ಎಂದು  ಎಸ್‌ಪಿ ವಿನಯ್‌ ಕುಮಾರ್‌ ಹೇಳಿದ್ದಾರೆ.

‘ಬುಧವಾರ ನಸುಕಿನ 2.11ರ ಹೊತ್ತಿಗೆ ಗೋಲ್ಡನ್‌ ಗಂಜ್‌ ನಿಲ್ದಾಣ­ದಲ್ಲಿ ದೆಹಲಿ– ದಿಬ್ರುಗಡ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ 12 ಬೋಗಿಗಳು ಹಳಿತಪ್ಪಿದವು’ ಎಂದು ಪೂರ್ವ ಮಧ್ಯ ರೈಲ್ವೆಯ ಮುಖ್ಯ ಸಾರ್ವ­ಜನಿಕ ಸಂಪ­ರ್ಕಾಧಿಕಾರಿ ಅರವಿಂದ್‌ ಕುಮಾರ್‌ ರಜಾಕ್‌’  ತಿಳಿಸಿದ್ದಾರೆ.

‘ಕೆಲವು ಬೋಗಿಗಳು ಹಳಿಯಿಂದ ಸುಮಾರು 700 ಅಡಿ ದೂರಕ್ಕೆ ಚದುರಿ ಬಿದ್ದಿವೆ’ ಎಂದೂ ಅವರು ಹೇಳಿದ್ದಾರೆ.


ಸ್ಥಳ ಪರಿಶೀಲನೆ ನಡೆಸಿದ ರೈಲ್ವೆ ಸಚಿವ ಸದಾನಂದಗೌಡ, ಇದು ವಿಧ್ವಂಸಕ ಕೃತ್ಯವೇ ಎನ್ನುವುದು ತನಿಖೆ­ಯಿಂದ ಗೊತ್ತಾಗಲಿದೆ ಎಂದಿದ್ದಾರೆ.

ಪರಿಹಾರ: ಮೃತರ ಕಟುಂಬಗಳಿಗೆ ತಲಾ ₨4 ಲಕ್ಷ ಪರಿಹಾರ ಘೋಷಿ­ಸಲಾಗಿದೆ. ಗಂಭೀರವಾಗಿ ಗಾಯ­ಗೊಂಡ­­ವರಿಗೆ ತಲಾ ₨1.5 ಲಕ್ಷ ಹಾಗೂ ಗಾಯ­ಗೊಂಡ­ವರಿಗೆ ತಲಾ ₨20,000 ಪರಿಹಾರ ಘೋಷಿಸ­ಲಾಗಿದೆ.

‘ಘಟನೆಯಲ್ಲಿ ನಕ್ಸಲೀಯರ ಕೈವಾಡ ಇದೆ ಎನ್ನುವುದರ ಬಗ್ಗೆ  ಈಗಲೇ ಏನನ್ನೂ ಹೇಳಲು ಸಾಧ್ಯ­ವಿಲ್ಲ’ ಎಂದು ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ಹೇಳಿದ್ದಾರೆ.

ಅಪಘಾತದ ಹಿಂದೆ ನಕ್ಸಲೀಯರ ಕೈವಾಡದ ಸಾಧ್ಯತೆ ಇದೆ ಎಂದು  ಬಿಹಾರ ಮುಖ್ಯಮಂತ್ರಿ ಜೀತನ ರಾಂ  ಮಾಂಝಿ  ಹೇಳಿದ್ದಾರೆ.

ಗುಪ್ತಚರ ವರದಿ ಇತ್ತು: ‘ಬಿಹಾರದ ತಿರ್‌ಹತ್‌ ಹಾಗೂ ಸರನ್‌ ಪ್ರಾಂತ್ಯಗಳಲ್ಲಿ ರೈಲ್ವೆ ಆಸ್ತಿಪಾಸ್ತಿ­ಗಳ ಮೇಲೆ ನಕ್ಸಲೀಯರು ದಾಳಿ ನಡೆ­ಸುವ ಸಾಧ್ಯತೆಯ ಬಗ್ಗೆ ರೈಲ್ವೆ ಸಚಿವಾಲ­ಯಕ್ಕೆ ಗುಪ್ತಚರ ಮಾಹಿತಿ ಬಂದಿತ್ತು’ ಎಂದು ರೈಲ್ವೆ ರಕ್ಷಣಾ ಪಡೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT