ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರಸ್‌: 4 ಸಾವು

Last Updated 25 ಜೂನ್ 2014, 15:32 IST
ಅಕ್ಷರ ಗಾತ್ರ

ಚಾಪ್ರಾ/ಬಿಹಾರ್‌ (ಪಿಟಿಐ):  ಪಾಟ್ನಾ­ದಿಂದ 75 ಕಿ.ಮೀ ದೂರದಲ್ಲಿರುವ ಗೋಲ್ಡನ್‌ ಗಂಜ್‌ ಬಳಿ ದೆಹಲಿ–ದಿಬ್ರುಗಡ ರಾಜಧಾನಿ ಎಕ್ಸ್‌ಪ್ರಸ್‌ ರೈಲು ಬುಧವಾರ ಬೆಳಗಿನ ಜಾವ ಹಳಿ ತಪ್ಪಿದ್ದು 12 ಬೋಗಿಗಳು ನೆಲಕ್ಕುರುಳಿವೆ. ಘಟನೆ­ಯಲ್ಲಿ ನಾಲ್ವರು ಪ್ರಯಾಣಿಕರು ಮೃತಪ­ಟ್ಟಿದ್ದು 8 ಜನರಿಗೆ ಗಂಭೀರ ಗಾಯಗ­ಳಾಗಿವೆ.

‘ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಈ ಘಟನೆ ನಡೆದ ಸ್ಥಳ­ದಲ್ಲಿ ಮೂರು ಟೈಂ ಬಾಂಬ್‌ಗಳು ಪತ್ತೆ­ಯಾಗಿದ್ದು, ನಕ್ಸಲರ ಕೃತ್ಯ ಎಂದು ಶಂಕಿಸ­ಲಾ­ಗಿದೆ. ಘಟನೆಯಲ್ಲಿ ಮೃತ­ಪಟ್ಟ­ವರಿಗೆ ₨2 ಲಕ್ಷ ಮತ್ತು ಗಂಭೀರವಾಗಿ ಗಾಯ­ಗೊಂಡವರಿಗೆ ₨1 ಲಕ್ಷ ಪರಿಹಾರ ಘೋಷಿಸಲಾಗಿದೆ  ಎಂದು ರೈಲ್ವೆ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

‘ಇದೊಂದು ಯೋಜಿತ ವಿಧ್ವಂಸಕ ಕೃತ್ಯ. ಬೆಳಗಿನ ಜಾವ 2 ಗಂಟೆ ಸುಮಾ­ರಿಗೆ ರೈಲ್ವೆ ಹಳಿಯಲ್ಲಿ ಭಾರಿ ಸ್ಫೊಟದ ಶಬ್ದ ಕೇಳಿಸಿತು, ಅದರ ಬೆನ್ನಿಗೇ ಬೋಗಿ­ಗಳು ಒಂದೊಂದಾಗಿ ಹಳಿ ತಪ್ಪಿದವು’ ಎಂದು   ರೈಲ್ವೆ ಮಂಡಳಿಯ ಅಧ್ಯಕ್ಷ ಅರು­­ಣೇಂದ್ರ ಕುಮಾರ್‌ ಹೇಳಿದ್ದಾರೆ.
ರೈಲ್ವೆ ಸಚಿವ ಸದಾನಂದ ಗೌಡ ಈ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT