ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಕಡತ ನಾಶಕ್ಕೆ ನಿರ್ಧಾರ

Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಳೆಯ ಕಡ­ತಗಳನ್ನು ವಿಲೇವಾರಿ ಮಾಡುತ್ತಿರುವ ಸರ್ಕಾರ, ಆಯ್ಕೆ ಆಧಾರಿತ ಹುದ್ದೆ­ಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಐದು ವರ್ಷಗಳಾಗಿರುವ ಅಧಿಕಾರಿಗಳಿಗೆ ಸಂಬಂಧಿಸಿದ ಗೋಪ್ಯ ಮಾಹಿತಿಯ ಕಡ­ತ­ಗಳನ್ನು ನಾಶ ಮಾಡಲು ನಿರ್ಧರಿಸಿದೆ.

ವಿವಿಧ ಇಲಾಖೆ ಮತ್ತು ಸಚಿವಾ­ಲಯಗಳ ಆಪ್ತ ಕಾರ್ಯದರ್ಶಿಗಳು, ಪ್ರಧಾನ ಆಪ್ತ ಕಾರ್ಯ­ದರ್ಶಿಗಳು, ಹಿರಿಯ ಪ್ರಧಾನ ಆಪ್ತ ಕಾರ್ಯ­ದರ್ಶಿಗಳ ವಾರ್ಷಿಕ ಗೋಪ್ಯ ವರದಿ (ಎಸಿಆರ್‌) ಅಥವಾ ವಾರ್ಷಿಕ ಸಾಧನೆ ನಿರ್ಣಯದ ವರದಿಗಳನ್ನು(ಎಪಿ­ಎಆರ್) ಕಲೆ ಹಾಕಲಾಗಿರುತ್ತದೆ. ನಿಯ­ಮಾನುಸಾರ ಈ ಅಧಿಕಾರಿಗಳು ಸೇವೆಯಿಂದ ನಿವೃತ್ತರಾದ ಮೇಲೂ  ಐದು ವರ್ಷಗಳ ಕಾಲ ಅವರಿಗೆ ಸಂಬಂ­ಧಿಸಿದ ಈ ವರದಿಗಳನ್ನು ಕಾದಿರಿಸ­ಲಾಗುತ್ತದೆ. ನಿವೃತ್ತ ಅಧಿಕಾರಿಗಳು ತಮಗೆ ಸಂಬಂಧಿಸಿದ ಗೋಪ್ಯ ವರದಿಯನ್ನು ನೀಡುವಂತೆ ಕೋರಿದರೆ ಅದನ್ನು ಒದಗಿಸಲಾಗುತ್ತದೆ.

ನಿಗಧಿತ ಅವಧಿ ಮುಗಿದ ಮೇಲೆ ಇಂತಹ ಕಡತಗಳನ್ನು ನಾಶ ಮಾಡ­ಬಹುದು ಎಂದು ವಿವಿಧ ಇಲಾಖೆ ಮತ್ತು ಸಚಿವಾಲಯಗಳಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈಗ ಸುತ್ತೋಲೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT