ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವೈಪರೀತ್ಯ ತಡೆ ಸಲಹಾ ಸಮಿತಿ ಪುನರ್‌ರಚನೆ

Last Updated 5 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹವಾಮಾನ ವೈಪರೀತ್ಯ ತಡೆ ಉನ್ನತ ಸಲಹಾ ತಂಡವನ್ನು ಬುಧವಾರ ಪುನರ್‌ರಚಿಸಿದ್ದಾರೆ. ದಕ್ಷಿಣ ಅಮೆರಿಕದ ಪೆರುವಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಜಾಗತಿಕ ತಾಪಮಾನ ಏರಿಕೆ ತಡೆ ಸಮಾವೇಶಕ್ಕೆ ಕೆಲವೇ ದಿನಗಳ ಮುನ್ನ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪುನರ್‌ರಚನೆಗೊಂಡಿರುವ ‘ಹವಾಮಾನ ವೈಪರೀತ್ಯ ತಡೆಗೆ ಪ್ರಧಾನಮಂತ್ರಿಯವರ ಸಮಿತಿ’ಯು ೧೮ ಸದಸ್ಯರನ್ನು ಒಳೊಗೊಂಡಿದೆ. ಟೆರಿ (ಟಾಟಾ ಎನರ್ಜೀಸ್‌ ಅಂಡ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌) ಅಧ್ಯಕ್ಷ ಆರ್‌.ಕೆ.ಪಚೌರಿ, ನಿತಿನ್‌ ದೇಸಾಯಿ ಮತ್ತು ನಿವೃತ್ತ ರಾಜತಾಂತ್ರಿಕ ಚಂದ್ರಶೇಖರ ದಾಸಗುಪ್ತ ಅವರನ್ನು ಸರ್ಕಾರೇತರ ಸದಸ್ಯರನ್ನಾಗಿ ಉಳಿಸಿಕೊಳ್ಳಲಾಗಿದೆ.

ಪರಿಸರವಾದಿ ಹಾಗೂ ಸೆಂಟರ್‌ ಫಾರ್‌ ಸೈನ್‌್ಸ ಅಂಡ್‌ ಎನ್ವಿರಾನ್‌ಮೆಂಟ್‌ನ (ಸಿಎಸ್‌ಇ) ಮಹಾನಿರ್ದೇಶಕಿ ಸುನೀತಾ ನಾರಾಯಣ್‌ ಮತ್ತು ಕೈಗಾರಿಕೋದ್ಯಮಿ ರತನ್‌ ಟಾಟಾ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆ.

ಯುಪಿಎ ಸರ್ಕಾರವು ಈ ಸಂಬಂಧ ೨೦೦೭ರಲ್ಲಿ ರಚಿಸಿದ್ದ ಉನ್ನತ ಸಮಿತಿಯಲ್ಲಿ ಟಾಟಾ ಮತ್ತು ಸುನೀತಾ ನಾರಾಯಣ್‌ ಅವರು ಇದ್ದರು. ಈ ಸಲಹಾ ಸಮಿತಿಯು ಮೂರು ವರ್ಷಗಳಿಂದ ಯಾವುದೇ ಸಭೆ ನಡೆಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT