ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಲಾ ಹಣ ಸಾಗಣೆ

ಆರೋಪಿಗಳಿಂದ ₨ 33.57 ಲಕ್ಷ ಜಪ್ತಿ
Last Updated 26 ನವೆಂಬರ್ 2014, 20:34 IST
ಅಕ್ಷರ ಗಾತ್ರ

ಬೆಂಗಳೂರು: ಹವಾಲಾ ಹಣ ಸಾಗಿಸು­ತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ­ರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ₨ 33.57 ಲಕ್ಷ ವಶಪಡಿಸಿಕೊಂಡಿದ್ದಾರೆ.

ಅಕ್ಕಿಪೇಟೆಯ ದೇವಿಚಂದ್‌ (57),  ಚಿಕ್ಕಪೇಟೆಯ ಪಿ.ಎಸ್‌.ಲೇನ್‌ನ ಗೋಪಾರಾಂ (25), ಹಳೆ ತರಗು­ಪೇಟೆಯ ರತನ್‌ (19) ಮತ್ತು ಕಬ್ಬನ್‌­ಪೇಟೆಯ ಮುಖೇಶ್‌ (33) ಬಂಧಿತರು.

ರಾಜಸ್ತಾನ ಮೂಲದ ಆರೋಪಿ­ಗಳು ಚಿಕ್ಕಪೇಟೆ ಸಮೀಪದ ಮಾಮೂಲ್‌ ಪೇಟೆಯಲ್ಲಿನ ವಿಕಾಸ್‌ ಬ್ಯಾಂಗಲ್‌ ಸ್ಟೋರ್‌್ಸ್‌ ಮತ್ತು ಮನೋಜ್‌ ಗಾರ್ಮೆಂಟ್ಸ್‌ ಮಳಿಗೆ­ಗಳಲ್ಲಿ ಹವಾಲಾ ಹಣ ಇಟ್ಟುಕೊಂಡಿ­ದ್ದರು. ಆ ಹಣಕ್ಕೆ ಸಂಬಂಧಪಟ್ಟಂತೆ ಅವರ ಬಳಿ ಯಾವುದೇ ದಾಖಲೆಪತ್ರಗಳು ಇರಲಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಆರು ತಿಂಗಳಿನಿಂದ ಈ ದಂಧೆ ನಡೆಸುತ್ತಿದ್ದ ಆರೋಪಿಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. ಅವರಿಂದ ನೋಟು ಎಣಿಕೆ ಯಂತ್ರ ಮತ್ತು ನಾಲ್ಕು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರ ವಿರುದ್ಧ ಚಿಕ್ಕಪೇಟೆ ಠಾಣೆ­ಯಲ್ಲಿ ದೂರು ದಾಖಲಿಸಲಾಗಿದೆ. ಅವರ ಸಹಚರರು ತಲೆಮರೆಸಿ­ಕೊಂಡಿ­ದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT