ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಯೋಜನೆ: ನೆಲ ಕಚ್ಚಿದ ಸಸಿಗಳು

ನಗರ ಸಂಚಾರ
Last Updated 1 ಸೆಪ್ಟೆಂಬರ್ 2014, 7:08 IST
ಅಕ್ಷರ ಗಾತ್ರ

ಗದಗ: ಅವಳಿ ನಗರವನ್ನು ಗ್ರೀನ್‌ ಸಿಟಿಯಾಗಿ ಮಾಡಲು ಆರಂಭಿಸಿದ ‘ಹಸಿರೇ ಉಸಿರು’ ಯೋಜನೆಯಲ್ಲಿ ನೆಟ್ಟ ಸಸಿಗಳು ಕೆಲವೇ ದಿನಗಳಲ್ಲಿ ನೆಲಕಚ್ಚಿದೆ.

68ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ 68 ಸಾವಿರ ಸಸಿಗಳನ್ನು ಗದಗ, ಬೆಟ ಗೇರಿ ನಗರ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಡಲಾಗಿತ್ತು.

ಸಚಿವ ಎಚ್‌. ಕೆ.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಕೇತಿಕವಾಗಿ ಸಸಿ ನೆಟ್ಟು ತಮ್ಮ ಕನ ಸಿನ ಯೋಜನೆಗೆ ಚಾಲನೆಯೂ ನೀಡಿ ದ್ದರು. ನಿರ್ವಹಣೆ ಜವಾಬ್ದಾರಿ ಹೊತ್ತ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರು ವುದರಿಂದ ಸಸಿಗಳು ಹಾಳಾಗುತ್ತಿವೆ.

ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಶಾಲಾ-, ಕಾಲೇಜುಗಳ ಆವರಣ, ಎಪಿಎಂಸಿ ಪ್ರದೇಶ, ಖಾಲಿ ನಿವೇಶನ, ಕೆ.ಎಚ್.ಬಿ ಕಾಲೊನಿ, ಹುಡ್ಕೋ ಬಡಾವಣೆ, ಕೈಗಾರಿಕೆ ಬಡಾ ವಣೆ, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ  ನೆಡಲಾಗಿರುವ ಸಸಿಗಳಲ್ಲಿ ಅರ್ಧದಷ್ಟು ಸಸಿಗಳು ಕೆಲವೇ ದಿನಗಳಲ್ಲಿ ಬಿಡಾಡಿ ದನಕ್ಕೆ ಆಹಾರವಾಗಿವೆ. ಒಂದೊಂದು ಕಡೆ ಬೇಕಾಬಿಟ್ಟಿಯಾಗಿ ಸಸಿಗಳನ್ನು ನೆಡಲಾಗಿದೆ. ಕೆಲವೆಡೆ ಗುಂಡಿ ತೋಡಿ ಹಾಗೆಯೇ ಬಿಡಲಾಗಿದೆ. ಸಸಿ ಬಾಗದಿರಲೆಂದು ಅಳವಡಿಸಿದ್ದ ಆಸರೆ ಕೋಲುಗಳು ಸಹ ನಾಪತ್ತೆ ಯಾಗಿವೆ. ಮತ್ತೆ ಕೆಲವು ಕಡೆ ಸಸಿಗಳನ್ನು ನೆಡದೆ ರಸ್ತೆ ಬದಿ ಬಿಸಾಡಲಾಗಿದೆ.

ಎಪಿಎಂಸಿ ಆವರಣ, ವಿಡಿಎಸ್‌ಟಿಸಿ ಮೈದಾನ, ಅಡವಿಸೋಮಾಪುರ ಹಾಗೂ ನಗರದ ವಿವಿಧ ಬಡಾವಣೆ ಗಳಲ್ಲಿ ಸಸಿಗಳು ಜಾನುವಾರು ಪಾಲಾ ಗಿವೆ.  ಬಡಾವಣೆ, ಕೈಗಾರಿಕಾ ಮತ್ತು ಶಾಲಾ, ಕಾಲೇಜು ಆವರಣಗಳಲ್ಲಿ ಸಸಿಗಳು ನೆಲಕ್ಕೆ ಬಿದ್ದಿವೆ.

ಕೆಲ ದಿನಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಮಾಡಲ್‌ ಹೈಸ್ಕೂಲ್‌, ಕಾಟನ್‌ ಸೇಲ್‌ ಸೊಸೈಟಿ ಗಳಲ್ಲಿ ಸಸಿಗಳು ಚಿಗುರಿದೆ. ಇದೇ ರೀತಿ ಸಸಿಗಳನ್ನು ಸಂರಕ್ಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಅವಳಿ ನಗರ ಹಸಿರಿನಿಂದ ಕಂಗೊಳಿಸಲಿದೆ.

‘ಕೇವಲ ಸಸಿ ನೆಟ್ಟರೆ ತಮ್ಮ ಪಾಲಿನ ಜವಾಬ್ದಾರಿ ಮುಗಿಯಿತು ಎಂಬ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ಧೋರಣೆ ಸರಿಯಲ್ಲ. ಪರಿಸರ ಉಳಿವಿಗೆ  ನಾಗರಿಕರು ಕೈ ಜೋಡಿಸಬೇಕು’ ಎನ್ನು ತ್ತಾರೆ ಪರಿಸರ ಪ್ರೇಮಿ ವೀರೇಶ ಅಂಗಡಿ.

ಬೇವು, ಹೊಂಗೆ, ಪೆಲೊಫಾರಂ, ಟೆಕೊಮಾ, ಬಂಗಾಲಿ, ರೇನ್‌ ಟ್ರೀ, ಬಸವನ ಪಾದ, ಚೆರಿ, ಗುಲ್‌ಮೊಹರು, ಸ್ಟೆಥೊಡಿಯಾ, ಅರಳೆ, ಆಲ, ನೆಲ್ಲಿ, ಸಂಪಿಗೆ, ನೇರಳಿ ಸೇರಿದಂತೆ ಮೂವತ್ತು ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಎನ್‌.ಅಘೋರೆ, ‘ಸಸಿಗಳು ನೆಲಕಚ್ಚಿ ರುವ ಕುರಿತು ದೂರುಗಳು ಬಂದಿವೆ. ಸಸಿಗಳ ನಿರ್ವಹಣೆ ಜವಾ ಬ್ದಾರಿ ಹೊತ್ತ ಶಿಕ್ಷಣ ಇಲಾಖೆ, ನಗರಸಭೆ, ಎಪಿಎಂಸಿಗೆ ಪತ್ರ ಬರೆಯಲಾಗುವುದು. ಜಾನು ವಾರುಗಳಿಂದ ಸಸಿಗಳನ್ನು ಸಂರಕ್ಷಿಸಲು ಬಳ್ಳಾರಿ ಜಾಲಿಮುಳ್ಳು ತಂದು ಸುತ್ತಲು ಬೇಲಿ ಹಾಕುವಂತೆ ಸಲಹೆ ನೀಡಲಾಗಿದೆ. ಆದರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಸಿಗಳನ್ನು ಬೆಳೆಸುವುದು ಮತ್ತು ಸಂ ರಕ್ಷಿಸುವುದು ಕೇವಲ ಅರಣ್ಯ ಇಲಾಖೆ ಜವಾಬ್ದಾರಿ ಅಲ್ಲ.  ಸಂಘ, ಸಂಸ್ಥೆ, ಶಾಲಾ ಮಕ್ಕಳು ಮತ್ತು ನಾಗರಿಕರು ಕೈ ಜೋಡಿಸಿದಾಗ ಮಾತ್ರ ಯೋಜನೆ ಯಶಸ್ಸು ಕಾಣಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT