ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಳೆಗಳ ಸಾವಿನ ಸಂಖ್ಯೆ 25ಕ್ಕೆ ಏರಿಕೆ

Last Updated 28 ಅಕ್ಟೋಬರ್ 2014, 10:17 IST
ಅಕ್ಷರ ಗಾತ್ರ

ಮಾಲ್ಡಾ, ಪಶ್ಚಿಮ ಬಂಗಾಳ (ಪಿಟಿಐ): ಮಾಲ್ಡಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸೋಮವಾರದಿಂದ ಈವರೆಗೂ ಮತ್ತೆ ಮೂರು ಶಿಶುಗಳು ಸಾವನ್ನಪ್ಪಿದ್ದು, ಕಳೆದ ಒಂದು ವಾರದಲ್ಲಿ ಮೃತ ಹಸುಳೆಗಳ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಸೋಮವಾರದಿಂದ ಮೂರು ಶಿಶುಗಳು ಸಾವನ್ನಪ್ಪಿದ್ದು, ಕಳೆದ ಬುಧವಾರದಿಂದ ಒಟ್ಟು 22 ಹಸುಳೆಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ ಎಂದು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೂ ಆಗಿರುವ ಎಂ.ಎ. ರಶೀದ್ ತಿಳಿಸಿದ್ದಾರೆ.

ಬ್ಲಾಕ್‌ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಮಕ್ಕಳನ್ನು ಮಾಲ್ಡಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿತ್ತು. ಹಾಗೂ ಅವುಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಕಳೆದ ಏಳು ದಿನಗಳಲ್ಲಿ ಮೃತ ಪಟ್ಟಿರುವ ಹಸುಗಳಿಗೆ ನಿಗದಿಗಿಂತ ಕಡಿಮೆ ತೂಕ, ಅಪೌಷ್ಠಿಕತೆ ಹಾಗೂ ಉಸಿರಾಟ ಸಂಬಂಧ ಸಮಸ್ಯೆಗಳಿಂದ ಬಳಲುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT