ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿಯಲ್ಲಿ ಖಾತೆ ತೆರದ ಭಾರತ

ಕಾಮನ್‌ವೆಲ್ತ್‌ ಕ್ರೀಡಾಕೂಟ
Last Updated 25 ಜುಲೈ 2014, 12:20 IST
ಅಕ್ಷರ ಗಾತ್ರ

ಗ್ಲಾಸ್ಗೊ ( ಪಿಟಿಐ): ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಪುರುಷರ ತಂಡ ಶುಕ್ರವಾರ ಮೊದಲ ಗೆಲುವಿನ ಖಾತೆ ತೆರೆದಿದೆ. ಇಲ್ಲಿ ನಡೆದ ವೇಲ್ಸ್‌ ವಿರುದ್ಧದ ಪಂದ್ಯದಲ್ಲಿ 3–1ರಲ್ಲಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.

ಭಾರತಕ್ಕೆ ಎರಡು ಗೋಲುಗಳು ಪೆನಾಲ್ಟಿ ಕಾರ್ನರ್‌ ಅವಕಾಶಗಳ ಮೂಲಕ ಲಭಿಸಿತು. ವಿ.ಆರ್‌. ರಘುನಾಥ್‌ 20ನೇ ನಿಮಿಷದಲ್ಲಿ ಮತ್ತು ರೂಪಿಂದರ್‌ ಪಾಲ್‌ ಸಿಂಗ್‌ 42ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಬದಲಿ ಆಟಗಾರನಾಗಿ ಕಣಕ್ಕಿಳಿದ ಗಿರ್‌ವಿಂದರ್‌ ಸಿಂಗ್‌ ಚಾಂಡಿ 47ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ಜಯ­ವನ್ನು ಸುಲಭಗೊಳಿಸಿದರು.

ವೇಲ್ಸ್‌ ಪರವಾಗಿ ಆಂಡ್ರ್ಯೊ ಕಾರ್ನಿಕ್‌ 23ನೇ ನಿಮಿಷದಲ್ಲಿ ಒಂದು ಗೋಲುಗಳಿಸಿದರು.  ಪೆನಾಲ್ಟಿ ಅವಕಾಶಗಳು ಲಭಿಸಿದರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವೇಲ್ಸ್‌ ಆಟಗಾರರು ಎಡವಿದರು.

ಸದ್ಯ ವಿಶ್ವ ಶ್ರೆಯಾಂಕದಲ್ಲಿ ಭಾರತ ಒಂಬತ್ತನೇ  ಸ್ಥಾನದಲ್ಲಿ ಮತ್ತು  ವೇಲ್ಸ್‌ 31ನೇ ಸ್ಥಾನದಲ್ಲಿದೆ.

ಬೆಳ್ಳಿ ಗೆದ್ದ ಶೂಟರ್‌: ಭಾರತೀಯ ಶೂಟರ್‌ ಮಲೈಕಾ ಗೋಯಲ್‌ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT