ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಮಹಿಳೆ ಕೊಲೆ

Last Updated 1 ಆಗಸ್ಟ್ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕಾಡು­ಗೊಂಡನ­ಹಳ್ಳಿ ಸಮೀ­ಪದ ಗೋವಿಂ­ದಪುರ ಮುಖ್ಯರಸ್ತೆ­ಯಲ್ಲಿ ಶುಕ್ರ­ವಾರ ಹಾಡಹ­ಗಲೇ ನಸ್ರಿನಾ ಸುಲ್ತಾನ್‌ (38) ಎಂಬ ಮಹಿ­ಳೆ­­­ಯನ್ನು ಕತ್ತು ಸೀಳಿ ಕೊಲೆ ಮಾಡಿ­ರುವ ದುಷ್ಕರ್ಮಿಗಳು,  ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮನೆಯಲ್ಲೇ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ನಸ್ರಿನಾ, ಪತಿ ಇಮ್ತಿ­ಯಾಜ್‌ ಪಾಷಾ ಅವರಿಂದ ದೂರ­ವಾಗಿ ಮೂವರು ಮಕ್ಕಳ ಜತೆ ವಾಸ­ವಾಗಿ­ದ್ದರು. ಘಟನೆ ವೇಳೆ ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದರು. ಹಿರಿಯ ಮಗ ಸುಬೇದ್ ಪಾಷಾ, ಪ್ರಾರ್ಥನೆಗೆ ತೆರಳುವುದಾಗಿ ಮಧ್ಯಾಹ್ನ 1.30ರ ಸುಮಾರಿಗೆ ಮನೆಯಿಂದ ಹೊರ ನಡೆದಿದ್ದ. ಈ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಾರ್ಥನೆಗೆ ಹೋಗಿದ್ದ ಮಗ, ಮಧ್ಯಾಹ್ನ 3 ಗಂಟೆಗೆ ಮನೆಗೆ ಹಿಂದಿ­ರು­ಗಿ­ದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಆತ, ಪೊಲೀಸರಿಗೆ ತಿಳಿಸಿದ್ದಾನೆ.

‘ದುಷ್ಕರ್ಮಿಗಳು ಬಲವಂತವಾಗಿ ಮನೆಯೊಳಗೆ ನುಗ್ಗಿಲ್ಲ. ಸುಬೇದ್‌ ಮನೆಗೆ ಬಂದಾಗ ಸ್ಟೌ ಉರಿಯು­ತ್ತಲೇ ಇತ್ತು. ಅದರ ಮೇಲೆ ಇಟ್ಟಿದ್ದ ಟೀ ಪಾತ್ರೆ ಸೀದು ಹೋಗಿತ್ತು. ಸ್ಟೌ ಪಕ್ಕದಲ್ಲಿ ಮೂರು ಲೋಟ ಜೋಡಿಸಿ ಟ್ಟಿದ್ದರು. ಇದನ್ನು ಗಮನಿಸಿದರೆ ಮನೆಗೆ ಬಂದಿದ್ದವರಿಗೆ ನಸ್ರೀನಾ ಟೀ ಮಾಡುತ್ತಿದಂತೆ ಕಾಣು­ತ್ತದೆ.  ಪರಿ­ಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮೊದಲು ಚಾಕುವಿನಿಂದ ಕುತ್ತಿಗೆ ಸೀಳಿರುವ ದುಷ್ಕರ್ಮಿಗಳು, ನಂತರ ಒಂದು ಬಾರಿ ಬೆನ್ನಿಗೆ ಇರಿದು ಚಿನ್ನಾಭರಣ ದೋಚಿ ಪರಾರಿಯಾ­ಗಿದ್ದಾರೆ. ಆದರೆ, ಎಷ್ಟು ಪ್ರಮಾಣದ ಆಭರಣ ಕಳವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿ ದುಬೈನಲ್ಲಿ
‘ಮೃತರ ಪತಿ ಇಮ್ತಿಯಾಜ್‌, ನಾಲ್ಕೈದು ವರ್ಷಗಳಿಂದ ದುಬೈ­ನಲ್ಲಿ ನೆಲೆಸಿದ್ದಾರೆ ಎಂದು ಹೇಳ­ಲಾಗುತ್ತಿದೆ. ಅವರನ್ನು ಸಂಪರ್ಕಿ­ಸುವ ಪ್ರಯತ್ನ ನಡೆಯುತ್ತಿದೆ. ಘಟನೆ ಸಂಬಂಧ ಕಾಡು­ಗೊಂಡ­ನ­ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖ­ಲಾಗಿದ್ದು, ಕೌಟುಂಬಿಕ ಕಲಹ, ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವ­ಹಾರ ಹೀಗೆ ಎಲ್ಲ ಆಯಾಮ­ಗಳಿಂ­ದಲೂ ಸಿಬ್ಬಂದಿ ತನಿಖೆ ನಡೆಸುತ್ತಿ­ದ್ದಾರೆ’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT