ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ಮಟ್ಟದ ರಸ್ತೆ ಓಟ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ಆಶ್ರಯದಲ್ಲಿ ಜುಲೈ 3ರಂದು  ಹಾವೇರಿಯಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ಮಟ್ಟದ ರಸ್ತೆ ಓಟದ ಸ್ಪರ್ಧೆಗಳು ನಡೆಯಲಿವೆ.

ಭಾನುವಾರ ಬೆಳಿಗ್ಗೆ 6.30ಕ್ಕೆ ಹಾವೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ಆರಂಭವಾಗಲಿವೆ ಎಂದು ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪುರುಷರ ವಿಭಾಗದಲ್ಲಿ 12ಕಿ.ಮೀ., ಮಹಿಳಾ ವಿಭಾಗದಲ್ಲಿ 6 ಕಿ.ಮೀ., 16 ವರ್ಷದೊಳಗಿನ ಬಾಲಕರ ಮತ್ತು ಬಾಲ ಕಿಯರ ವಿಭಾಗಗಳಲ್ಲಿ 2.5 ಕಿ.ಮೀ. ದೂರದ ಓಟದ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು ಜುಲೈ 2ರಂದು ಮಧ್ಯಾಹ್ನ 3 ಗಂಟೆಯ ಮೇಲೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ, ಚೆಸ್ಟ್‌ ನಂಬರ್‌ಗಳನ್ನು ಪಡೆಯಬಹುದು.

16 ವರ್ಷದೊಳಗಿನವರ ವಿಭಾಗ ದಲ್ಲಿ ಸ್ಪರ್ಧಿಸುವವರು ವಯೋಮಿತಿಯ ಪುರಾವೆಗಾಗಿ ಜನನ ಪ್ರಮಾಣ ಪತ್ರ ನೀಡುವಾಗ ತಾವು ಶಿಕ್ಷಣ ಪಡೆದ ಅಥವಾ ಪಡೆಯುತ್ತಿರುವ ಶಾಲೆಯ ಮುಖ್ಯಸ್ಥರಿಂದ ಪಡೆದ ದೃಢೀಕರಣ ಪತ್ರದ ಮೂಲ ಪ್ರತಿಯನ್ನು ಹಾಜರು ಪಡಿಸಬೇಕು. ಒಟ್ಟು ₹36 ಸಾವಿರ ನಗದು ಬಹು ಮಾನಗಳನ್ನು ನೀಡಲಾಗುವುದು ಎಂದು ಕ್ಲಬ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT