ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ಗಳೊ, ಧರ್ಮಛತ್ರಗಳೊ?

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದ ಅನೇಕ ವಿದ್ಯಾರ್ಥಿ ನಿಲಯಗಳಲ್ಲಿ ಅಧಿಕೃತವಾಗಿ ದಾಖಲಾದ ವಿದ್ಯಾರ್ಥಿಗಳಿ­ಗಿಂತ ಅನಧಿಕೃತ  ವಿದ್ಯಾರ್ಥಿಗಳೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಇದರಿಂದ ನಿಲಯದ ವಿದ್ಯಾರ್ಥಿಗಳು ಇಲ್ಲಸಲ್ಲದ ಕಿರಿಕಿರಿಗೆ ಒಳ­ಗಾಗ­­ಬೇಕಿದೆ. ಸೌಲಭ್ಯಗಳೂ ಏರುಪೇರು ಆಗು­ತ್ತಿವೆ. ಅನಧಿಕೃತವಾಗಿ ಬಂದು ಸೇರಿ­ಕೊಂಡಿ­ರುವವರ ವಿರುದ್ಧ ಗೂಂಡಾ ಕಾಯ್ದೆ­ಯಡಿ ಕ್ರಮ ಜರುಗಿಸುವುದಾಗಿ ಸಮಾಜ ಕಲ್ಯಾಣ ಸಚಿವರು ಹೇಳಿದ್ದುದು ನೆನಪು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಅನಧಿಕೃತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಿಲಯಗಳು ಅನೈತಿಕ ಚಟುವಟಿಕೆಗಳ ತಾಣ­ಗಳಾಗಿ ಪರಿವರ್ತನೆ ಆಗುತ್ತಿವೆ.  ನಿಲಯ ಮೇಲ್ವಿಚಾರಕರು ಕಠಿಣ ಕ್ರಮ ತೆಗೆದು­ಕೊಳ್ಳು­ವಲ್ಲಿ ವಿಫಲರಾಗಿದ್ದಾರೆ. ಆಗಾಗ್ಗೆ ಭೇಟಿ ನೀಡಬೇಕಾಗಿದ್ದ ಅಧಿಕಾರಿ­ಗಳು ಕರ್ತವ್ಯಪ್ರಜ್ಞೆ ಮರೆತು ಕಂಡೂ ಕಾಣ­ದಂತೆ ವರ್ತಿಸುತ್ತಿ­ದ್ದಾರೆ. 

ನಿಯಮದ ಪ್ರಕಾರ ತಿಂಗಳಿಗೆ ಒಮ್ಮೆಯಾ­ದರೂ ಉನ್ನತ ಅಧಿಕಾರಿಗಳು, ಜನಪ್ರತಿನಿಧಿ­ಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಆದರೆ ಈ ಕಾರ್ಯವೂ ನಡೆಯುತ್ತಿಲ್ಲ. ಸ್ಥಳೀಯ ಶಾಸಕರೇ ಸಾಮಾನ್ಯವಾಗಿ ತಾಲ್ಲೂಕು ಕೇಂದ್ರ­ಗಳಲ್ಲಿನ ವಸತಿ ನಿಲಯಗಳ ಅಧ್ಯಕ್ಷರಾಗಿ­ರು­ತ್ತಾರೆ. ಶಾಸಕರು, ಸಂಸದರು, ಸ್ಥಳೀಯ ಜನ­ಪ್ರತಿನಿಧಿಗಳು ಸೌಜನ್ಯಕ್ಕಾದರೂ ನಿಲಯಗಳಿಗೆ ಭೇಟಿ ನೀಡಿದ್ದರೆ ಈ ದುಃಸ್ಥಿತಿ ಇರುತ್ತಿರಲಿಲ್ಲ. ಮಂಡ್ಯ ಜಿಲ್ಲೆಯಲ್ಲಿ ವಸತಿ ನಿಲಯಗಳಲ್ಲಿ ಹೇಳತೀರದ ಸಮಸ್ಯೆಗಳಿವೆ.  ಜನಪ್ರತಿನಿಧಿಗಳು ಈಗಲಾದರೂ ಇತ್ತ ಗಮನಹರಿಸುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT