ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್‌ ಹಾದಿಯಲ್ಲಿ ಮೋದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್‌ ರೀತಿಯಲ್ಲಿ ಸರ್ವಾಧಿಕಾರಿ ಆಗುವತ್ತ ಸಾಗುತ್ತಿ­ದ್ದಾರೆ. ದೇಶದ ಜನರು ಮುಂದೆ ಕೆಟ್ಟ ದಿನಗಳನ್ನು ಎದುರಿಸಬೇಕಾಗ­ಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.­ದೇವರಾಜ ಅರಸು ಜನ್ಮದಿನ
ಸಮಾ­ರಂಭ­ದಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಸಚಿವರ ಸಹಾಯ­ದಿಂದ ಕೇಂದ್ರ ಸರ್ಕಾರವನ್ನು ನಡೆಸು­ತ್ತಿಲ್ಲ. ಸಚಿವರ ಅಧಿಕಾರ ಮೊಟಕು­ಗೊಳಿಸಿ, ಅಧಿಕಾರಿಗಳ ನೆರವಿನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇದು ಅವರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ’ ಎಂದರು.

‘ಮೂರು ತಿಂಗಳ ಅವಧಿಯಲ್ಲೇ ಮೋದಿ ಅವರು ಹಿಟ್ಲರ್‌ ರೀತಿ ಆಗಿ­ದ್ದಾರೆ. ಅವರ ಸುತ್ತ ಇರುವವರು ಗೋಬೆಲ್ಸ್‌ನಂತೆ ನಡೆದು­ಕೊಳ್ಳುತ್ತಿ­ದ್ದಾರೆ. ಸುಳ್ಳು ಹೇಳಿ, ಜನರನ್ನು ದಿಕ್ಕು­ತಪ್ಪಿಸಿ ಪ್ರಧಾನಿ ಆದ ಮೋದಿ ಅವರು ಈಗ ದೇಶವನ್ನು ಸರ್ವಾಧಿಕಾರಿ ಆಡಳಿ­ತದ ನೆರಳಿಗೆ ಕೊಂಡೊಯ್ಯಲು ಯತ್ನಿಸು­ತ್ತಿದ್ದಾರೆ’ ಎಂದು ಟೀಕಾಪ್ರಹಾರ ನಡೆಸಿದರು.

‘ಈ ವಿಷಯವನ್ನು ಮಾತನಾಡ­ಬಾರದು ಅಂದುಕೊಂಡಿದ್ದೆ. ಆದರೆ, ಸುಮ್ಮನೆ ಇರಲು ಸಾಧ್ಯವಿಲ್ಲ. ಹಾಗಾಗಿ ಮಾತನಾಡಲೇಬೇಕಾಗಿದೆ. ಮಾತು ಮಾತಿಗೂ ಗುಜರಾತ್‌ ಮಾದರಿ ಎನ್ನು­ತ್ತಾರೆ. ಎಲ್ಲಿದೆ ಗುಜರಾತ್‌ ಮಾದರಿ? ಹಾಗೆಂದರೆ ಏನು? ಪ್ರಮುಖ ಕ್ಷೇತ್ರ­ಗಳಲ್ಲಿ ಹಿಂದುಳಿದಿರುವ ರಾಜ್ಯವನ್ನು ಮಾದರಿ ಎಂದು ಒಪ್ಪಿಕೊಳ್ಳುವುದು ಹೇಗೆ?’ ಎಂದು ಪ್ರಶ್ನಿಸಿದರು.

ಗೌರವ ನೀಡುತ್ತಿಲ್ಲ: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಮಾತನಾಡಿ, ‘ದೇವರಾಜ ಅರಸು ಅವರ ಗರಡಿಯಲ್ಲಿ ಪಳಗಿದ ಅನೇಕರು ಪ್ರಭಾವಿ ನಾಯಕ­ರಾಗಿ ಬೆಳೆದರು. ಆದರೆ, ಅವರು ಹಾಕಿ­ಕೊಟ್ಟ ಮಾರ್ಗದಲ್ಲಿ ನಡೆಯುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಯುಪಿಎ ಅಧಿಕಾರದಲ್ಲಿ ಇದ್ದಾಗ ಜಾರಿಗೆ ತಂದ ಜನಪರ ಯೋಜನೆ ಗಳಿಗೆ ಸರಿಯಾದ ಪ್ರಚಾರ ನೀಡದ ಕಾರಣ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನು­ಭವಿಸಿತು. ರಾಜ್ಯ ಸರ್ಕಾರ ಆ ರೀತಿಯ ತಪ್ಪು ಮಾಡಬಾರದು. ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಶೀಘ್ರದಲ್ಲಿ ಕಾರ್ಯಕ್ರಮ­ವೊಂದನ್ನು ಹಮ್ಮಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT