ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಪ್ರದೇಶ 600 ಪ್ರವಾಸಿಗರ ಸ್ಥಳಾಂತರ

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶಿಮ್ಲಾ(ಐಎಎನ್‌ಎಸ್‌): ಹಿಮಾ­ಚಲ ಪ್ರದೇಶದಲ್ಲಿ ಭಾರಿ ಹಿಮಪಾತ­ವಾಗು­ತ್ತಿರುವ ಕಾರಣ ಮನಾಲಿಯ ಪ್ರವಾಸಿ ರೆಸಾರ್ಟ್‌ ನಲ್ಲಿ ಸಿಲುಕಿದ್ದ ಸುಮಾರು 600 ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾನು­ವಾರ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ 18 ಪ್ರವಾಸಿಗರು ಹಿಮ­ದಲ್ಲಿ ಸಿಲುಕಿದ್ದು ಅವರಿಗೆ ಮನಾಲಿ­ಯಿಂದ 35ಕಿ.ಮೀ ದೂರದ ಮಾರ್‍ಹಿ­ಯಲ್ಲಿ ವಸತಿ ಕಲ್ಪಿಸಿಕೊಡ­ಲಾ­ಗಿದೆ ಎಂದು ಉಪ ಜಿಲ್ಲಾ ಮ್ಯಾಜಿ­ಸ್ಟ್ರೇಟ್‌ ವಿನಯ್‌ ಧಿಮಾನ್‌ ತಿಳಿಸಿದ್ದಾರೆ.

‘ರೋಹ್‌ಟಂಗ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಲಬಾ ಹಾಗೂ ಮಾರ್‍ಹಿ ಮಾರ್ಗದ ನಡುವೆ ಸಿಲುಕಿದ್ದ ಬಹುತೇಕ ಪ್ರವಾ­ಸಿಗರನ್ನು ಅಲ್ಲಿಂದ ಸ್ಥಳಾಂತರಿಸ­ಲಾ­ಯಿತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT