ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿತ್ತು ಜಯನಗರ

Last Updated 11 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಜನಪ್ರಿಯ ಸ್ಥಳಗಳಲ್ಲಿ ಜಯನಗರ ಕೂಡ ಒಂದು. ಪ್ರಶಾಂತ ನಗರ ಎಂದೇ ಖ್ಯಾತಿಯಾಗಿರುವ ಜಯನಗರ ಹಿರಿಯ ನಾಗರಿಕರ ನೆಮ್ಮದಿಯ ತಾಣ. ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನೂ ಒಳಗೊಂಡಿರುವ ಜಯನಗರ ಯುವಪಡೆಯನ್ನೂ ಸೆಳೆದುಕೊಂಡಿದೆ.
ಶಾಪಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದಂಥ ಜಾಗವಾಗಿ ಜಯನಗರ ಇಂದಿಗೆ ಬದಲಾಗಿದೆ.

ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಜಯನಗರ ಸ್ವಾತಂತ್ರ್ಯಾ ನಂತರ ನಿರ್ಮಿಸಲಾದ ಮೊದಲ ವಸತಿ ಪ್ರದೇಶ. 1948ರಲ್ಲಿ ಜಯನಗರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಒಟ್ಟು 10 ಬ್ಲಾಕ್‌ಗಳನ್ನಾಗಿ ವಿಂಗಡಿಸಿ ಅವುಗಳಲ್ಲಿ ಮೂರು ಮತ್ತು ನಾಲ್ಕನೇ ಬ್ಲಾಕ್‌ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

ಜೆಪಿ ನಗರ, ಬಸವನಗುಡಿ, ಬಿಟಿಎಂ ಬಡಾವಣೆ, ಗುರಪ್ಪನಪಾಳ್ಯ, ಬನಶಂಕರಿ, ಸದುಗುಂಟೆಪಾಳ್ಯ ಪ್ರದೇಶಗಳ ಮಧ್ಯಭಾಗದಲ್ಲಿರುವ ಜಯನಗರದಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ಹೋಟೆಲ್‌ಗಳು, ದೇವಾಲಯಗಳಿವೆ. ಇಲ್ಲಿರುವ ಅಶೋಕ ಪಿಲ್ಲರ್‌ ಪ್ರಸಿದ್ಧಿ ಪಡೆದಿದೆ. ಅಂದಹಾಗೆ ಜಯನಗರದಲ್ಲಿರುವ ಶಾಪಿಂಗ್‌ ಕಾಂಪ್ಲೆಕ್ಸ್‌ ಬೆಂಗಳೂರಿನ ಮೊದಲ ಶಾಪಿಂಗ್‌ ಕಾಂಪ್ಲೆಕ್ಸ್‌ ಎಂಬುದು ವಿಶೇಷ.

ನಗರದ ಇತರ ಬಡಾವಣೆಗಳು ಬದಲಾವಣೆಯ ದಾಳಕ್ಕೆ ಸಿಲುಕಿ ಹಸಿರನ್ನು ಕಳೆದುಕೊಳ್ಳುತ್ತಿವೆ. ಆದರೆ ಹಸಿರನ್ನು ಉಳಿಸಿಕೊಂಡ ಕೆಲವೇ ಕೆಲವು ಬಡಾವಣೆಗಳಲ್ಲಿ ಜಯನಗರವೂ ಒಂದು. ಅಲ್ಲದೇ, ಜಯನಗರ ಆಕರ್ಷಕ ಉದ್ಯಾನಗಳಿಂದ ಶೋಭಿಸುತ್ತಿದೆ.

ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶವಾಗಿರುವ ಜಯನಗರ ವಾಸಯೋಗ್ಯ ಸ್ಥಳ ಎಂದು ಗುರುತಿಸಿಕೊಂಡಿದ್ದು, ವಿವಿಧ ಕ್ಷೇತ್ರದ ಗಣ್ಯರ ಮನೆಗಳು ಇದೇ ಪ್ರದೇಶದಲ್ಲಿವೆ.  ವಿಸ್ತಾರವಾದ ರಸ್ತೆಗಳು, ಪಾದಚಾರಿ ಮಾರ್ಗ, ಸುಂದರವಾದ ಗಿಡ–ಮರಗಳು ಜಯನಗರದ ಗರಿಮೆಯನ್ನು ಹೆಚ್ಚಿಸಿವೆ.

ಅಂತೆಯೇ ಜಯನಗರದಲ್ಲಿ ಮನೆ ಹಾಗೂ ನಿವೇಶನಗಳ ಬೆಲೆ ಗಗನಕ್ಕೇರಿ ನಿಂತಿದೆ. ಆರಂಭದ ದಿನಗಳಲ್ಲಿ ಇಲ್ಲಿ ಸಾವಿರಾರು ರೂಪಾಯಿ ಬೆಲೆಗೆ ದಕ್ಕುತ್ತಿದ್ದ ನಿವೇಶನಗಳು ಇದೀಗ ಕೋಟ್ಯಂತರ ರೂಪಾಯಿಗೆ ಜಿಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT