ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಸೇನಾನಿಗೆ ಕಣ್ಣೀರ ವಿದಾಯ

Last Updated 12 ಫೆಬ್ರುವರಿ 2016, 9:52 IST
ಅಕ್ಷರ ಗಾತ್ರ

ಬೆಟದೂರ: ಹುತಾತ್ಮ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ಬೆಟದೂರಿನಲ್ಲಿ ಶುಕ್ರವಾರ ನಡೆಯಿತು.

ನೆರೆದ ಸಾವಿರಾರು ಜನ ಹುತಾತ್ಮ ಹನುಮಂತಪ್ಪ ಕೊಪ್ಪದ ಅವರಿಗೆ ಕಣ್ಣೀರ ವಿದಾಯ ಹೇಳಿದರು. ಅಗಲಿದ ಕೊಪ್ಪದ ಅವರಿಗೆ ಸೇನೆಯ ಗೌರವ ವಂದನೆ ಸಲ್ಲಿಸಲಾಯಿತು.

ಹರಪನಹಳ್ಳಿ ತಾಲ್ಲೂಕು ನೀಲಗುಂದದ ಚನ್ನಬಸವಣ್ಣ ಶಿವಯೋಗಿ ಅವರ ನೇತೃತ್ವದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.

ನೆರೆದಿದ್ದ ಜನ ಹನುಮಂತಪ್ಪ ಅವರನ್ನು ಸ್ಮರಿಸಿ ಘೋಷಣೆ ಕೂಗಿದರು. ಹಲವರ ಕಣ್ಣಾಲಿಗಳಲ್ಲಿ ಜಿನುಗುತ್ತಿದ್ದ ಕಣ್ಣೀರ ಹನಿಗಳು ದೇಶಭಕ್ತನ ಸಾವಿಗೆ ಸಾರ್ಥಕತೆ ತಂದುಕೊಟ್ಟವು.

ಚುನಾವಣೆ ಮುಂದೂಡಿಕೆ: ಹುತಾತ್ಮ ಕೊಪ್ಪದ ಸ್ವಗ್ರಾಮ ಬೆಟದೂರಿನ ನಾಲ್ಕು ಮತಗಟ್ಟೆಗಳಲ್ಲಿ ಶನಿವಾರ ನಡೆಯಬೇಕಿದ್ದ ಚುನಾವಣೆಯನ್ನು ಸೋಮವಾರಕ್ಕೆ (ಫೆ.15ಕ್ಕೆ) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT