ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್ದೆ ಭರ್ತಿಗೆ ಕೆಪಿಎಸ್‌ಸಿಗೆ ಪ್ರಸ್ತಾವ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎ ಮತ್ತು ಬಿ ಗುಂಪಿನ ಒಟ್ಟು 452 ಮಂದಿ ಗೆಜೆಟೆಡ್‌ ಪ್ರೊಬೇ­ಷನರಿ ಅಧಿಕಾರಿಗಳನ್ನು ನೇಮಕ ಮಾಡಿಕೊಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು  ಕರ್ನಾಟಕ ಲೋಕ­ಸೇವಾ ಆಯೋಗ­ವನ್ನು (ಕೆಪಿಎಸ್‌ಸಿ) ಕೇಳಿದೆ. ಈ ಸಂಬಂಧದ ಪ್ರಸ್ತಾವ ಮಂಗಳ­ವಾರ ಕೆಪಿಎಸ್‌ಸಿ ಕಚೇರಿ ತಲುಪಿದೆ.

ಇದರಲ್ಲಿ ‘ಎ’ ಗುಂಪಿನ 202 ಮತ್ತು ಬಿ ಗುಂಪಿನ 250 ಹುದ್ದೆಗಳಿವೆ. ಸಂವಿಧಾನದ 371 ಜೆ ಪ್ರಕಾರ ಮೀಸಲಾತಿ ಹಾಗೂ ಇತರ ಮೀಸ­ಲಾತಿ­ಗಳನ್ನು ಸರ್ಕಾರವೇ ನಿಗದಿ ಮಾಡಿದೆ.

2011ರ ನಂತರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನೇಮಕಾತಿ ನಡೆದಿರಲಿಲ್ಲ. 2011ನೇ ಸಾಲಿನ ನೇಮಕಾತಿ ಪಟ್ಟಿಯನ್ನು ವ್ಯಾಪಕ ಭ್ರಷ್ಟಾಚಾರದ ಆರೋಪದ ಮೇಲೆ ರದ್ದು ಪಡಿಸಲಾಗಿದೆ.

ಕೆಪಿಎಸ್‌ಸಿ ಸುಧಾರಣೆಗೆ ಸಂಬಂಧಿ­ಸಿದ  ಪಿ.ಸಿ. ಹೋಟಾ ಸಮಿತಿಯ ಶಿಫಾ­ರಸಿನ ಪ್ರಕಾರವೇ ಈಗ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೊಸ ಪಠ್ಯವನ್ನು ರೂಪಿಸಲಾಗಿದ್ದು 1950 ಅಂಕಗಳ ಲಿಖಿತ ಪರೀಕ್ಷೆ ಹಾಗೂ 200 ಅಂಕಗಳಿಗೆ ಸಂದರ್ಶನ ನಡೆಯಲಿದೆ. ಯುಪಿಎಸ್‌ಸಿ ಮಾದರಿಯನ್ನೇ  ಈ ಬಾರಿ ನೇಮ­ಕಾತಿಗೆ ಅನುಸರಿಸ­ಲಾಗುತ್ತದೆ.

ವಯೋಮಿತಿ ಏರಿಕೆ
2011ರಿಂದ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ಈ ಬಾರಿ ಪರೀಕ್ಷೆ ತೆಗೆದುಕೊಳ್ಳುವವರ ವಯಸ್ಸಿನ ಮಿತಿಯನ್ನು ಹೆಚ್ಚಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 37, ಹಿಂದುಳಿದ ವರ್ಗದವರಿಗೆ 40 ಹಾಗೂ ಪರಿಶಿಷ್ಟರಿಗೆ 42 ವರ್ಷದ ಮಿತಿ ಹೇರಲಾಗಿದೆ.

*ಪ್ರಸ್ತಾವ ಬಂತು, ಅಧ್ಯಕ್ಷರು ಬರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT