ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುದ್‌ಹುದ್‌: ಸ್ಪಷ್ಟ ಚಿತ್ರ ರವಾನಿಸಿದ್ದ ಇನ್ಸ್ಯಾಟ್‌ 3ಡಿ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದ ವಿದ್ವಂಸಕಾರಿ ಚಂಡಮಾರುತ ‘ಹುದ್‌ ಹುದ್‌’ದ ಸುಳಿವು ನೀಡುವಲ್ಲಿ ಈ ವರ್ಷದ ಜನವರಿಯಿಂದ ಕಾರ್ಯಾ­ಚರಣೆ ಆರಂಭಿಸಿದ್ದ ಇನ್ಸ್ಯಾಟ್‌ 3ಡಿ ಕಳುಹಿಸಿದ್ದ ಚಿತ್ರಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ಸ್ಯಾಟ್‌3ಡಿ ಉಪಗ್ರಹ ರವಾನಿ­ಸಿದ ಎಲ್ಲಾ ಚಿತ್ರಗಳನ್ನೂ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲಾಗಿದೆ. ಅಲ್ಲದೆ ಅದು ಕಳುಹಿಸಿದ ಚಂಡಮಾರುತದ ಚಿತ್ರಗಳನ್ನು ಇಲಾಖೆಯ ಜಾಲತಾಣ­ದಲ್ಲಿ ಪ್ರಕಟಿಸುವ ಮೂಲಕ ಜನರಿಗೆ ಲಭ್ಯವಾಗುವಂತೆ ಮಾಡಲಾ­ಗಿತ್ತು ಎಂದು ಐಎಂಡಿ ಹೇಳಿದೆ.

‘ಉಪಗ್ರಹ ಕಳುಹಿಸಿದ ಚಿತ್ರಗಳು ಉತ್ತಮ ರೆಸೊಲ್ಯೂಷನ್‌ ಹೊಂದಿ­ದ್ದವು ಮತ್ತು ಖಚಿತ ಮಾಹಿತಿ ನೀಡಿತ್ತು’ ಎಂದು ಚಂಡಮಾರುತ ಮುನ್ನೆಚ್ಚರಿಕೆ ವಿಭಾಗದ ವಿಜ್ಞಾನಿ ಮೃತ್ಯುಂಜಯ್‌ ಮಹಾಪಾತ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT