ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡ್ಲಿ ವಿಚಾರಣೆ ಮುಂದೂಡಿಕೆ

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವಿಡಿಯೊ ಕಾನ್ಫರೆನ್ಸ್‌ ವೇಳೆ ತಾಂತ್ರಿಕ ದೋಷ ಕಾಣಿಸಿದ್ದರಿಂದ ಪಾಕಿಸ್ತಾನ ಮೂಲದ ಅಮೆರಿಕದ ಉಗ್ರ ಡೇವಿಡ್‌ ಹೆಡ್ಲಿಯ ಮೂರನೇ ದಿನದ ವಿಚಾರಣೆ ರದ್ದುಗೊಂಡಿದೆ.

ಅಮೆರಿಕದ ಅಜ್ಞಾತ ಸ್ಥಳದಿಂದ ಸತತ ಎರಡು ದಿನ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡಿದ್ದ ಹೆಡ್ಲಿ, 2008ರ ಮುಂಬೈ ದಾಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದ.

‘ತಾಂತ್ರಿ ದೋಷದ ಕಾರಣ ವಿಡಿಯೊ ಕಾನ್ಫರೆನ್ಸ್‌ ಸಂಪರ್ಕ ಸಾಧಿಸಲು ಆಗಲಿಲ್ಲ. ಅವರ ಕಡೆಯಿಂದ (ಅಮೆರಿಕದಲ್ಲಿ) ಈ ತೊಂದರೆ ಕಾಣಿಸಿಕೊಂಡಿದೆ. ಹಲವು ಸಲ ಪ್ರಯತ್ನಿಸಿದರೂ ಸಂಪರ್ಕ ದೊರೆಯಲಿಲ್ಲ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಉಜ್ವಲ್‌ ನಿಕಂ ಹೇಳಿದರು. ವಿಚಾರಣೆ ಗುರುವಾರ ಮತ್ತೆ ಮುಂದುವರಿಯಲಿದೆ.

ಫೆಬ್ರುವರಿ 12ರವರೆಗೆ ಹೆಡ್ಲಿಯ ವಿಚಾರಣೆ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಇದೀಗ ವಿಚಾರಣೆ ಅವಧಿಯನ್ನು ಅಲ್ಪ ವಿಸ್ತರಿಸುವ ಸಾಧ್ಯತೆಯಿದೆ.

ಸುಳ್ಳಿನ ಕಂತೆ: ಮಲಿಕ್‌ ಲೇವಡಿ  (ಇಸ್ಲಾಮಾಬಾದ್‌ ವರದಿ):  ಭಾರತದಲ್ಲಿ ನಡೆದಿರುವ ಎಲ್ಲ ಭಯೋತ್ಪಾದನಾ ದಾಳಿಗಳಿಗೆ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯೇ ಹೊಣೆ ಎಂದಿರುವ ಹೆಡ್ಲಿ ಹೇಳಿಕೆಯನ್ನು  ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ರೆಹಮಾನ್‌ ಮಲಿಕ್‌ ತಳ್ಳಿಹಾಕಿದ್ದು, ಮುಂಬೈನ ದಾಳಿ ಸಂಬಂಧ ಉಗ್ರನ ಹೇಳಿಕೆಯನ್ನು ‘ಸುಳ್ಳುಗಳ ಕಂತೆ’ ಎಂದಿದ್ದಾರೆ.

ಹೆಡ್ಲಿ ತಪ್ಪೊಪ್ಪಿಗೆ ಹೇಳಿಕೆಗಳನ್ನು  ಪಾಕಿಸ್ತಾನದ ಹೆಸರಿಗೆ ಮಸಿ ಹಚ್ಚಲು ಭಾರತ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕ್‌ ಕೂಡಾ ವಿಚಾರಣೆ ನಡೆಸಲಿ (ನವದೆಹಲಿ ವರದಿ): ಡೇವಿಡ್‌ ಹೆಡ್ಲಿಯನ್ನು ಪಾಕಿಸ್ತಾನದ ನ್ಯಾಯಾಲಯ ವಿಚಾರಣೆಗೆ ಒಳಪಡಿಸಬೇಕು ಎಂದು ಭಾರತವು ಆ ದೇಶವನ್ನು ಕೋರುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT