ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಕ್ಕಳಿಗೆ ‘ಪ್ರಗತಿ ವಿದ್ಯಾರ್ಥಿವೇತನ’

ತಾಂತ್ರಿಕ ಶಿಕ್ಷಣ ಉತ್ತೇಜಿಸುವ ಉದ್ದೇಶ
Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಹೆಚ್ಚು ಅಂಕಗಳಿಸುವ ಹೆಣ್ಣು ಮಕ್ಕಳನ್ನು ತಾಂತ್ರಿಕ ಶಿಕ್ಷಣಕ್ಕೆ ಹೋಗು­ವಂತೆ ಉತ್ತೇಜಿಸಲು ಕೇಂದ್ರ ಸರ್ಕಾ­ರವು ‘ಪ್ರಗತಿ’ ಎಂಬ ವಿದ್ಯಾರ್ಥಿವೇತನ ಯೋಜನೆಯನ್ನು ಆರಂಭಿಸಿದೆ.

ಎಂಜಿನಿಯರಿಂಗ್‌ ಮತ್ತಿತರ ತಾಂತ್ರಿಕ ಕೋರ್ಸ್‌ಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಂಡು ಮಕ್ಕಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇದೆ. ಇದನ್ನು ಸರಿದೂಗಿಸು­ವುದು ಇದರ ಉದ್ದೇಶ.

ಈ ಯೋಜನೆಯಡಿ ಸರ್ಕಾರವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮೂಲಕ ಪ್ರತಿವರ್ಷ ೪೦೦೦ ವಿದ್ಯಾರ್ಥಿ ವೇತನಗಳನ್ನು ನೀಡ­ಲಿದೆ. ವಾರ್ಷಿಕ ಆದಾಯ ₨ ೬ ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬದ ಒಬ್ಬ ಹೆಣ್ಣು ಮಗಳಿಗೆ ಇದನ್ನು ನೀಡಲಾ­ಗು­ವುದು. ಅಂಕಗಳಿಕೆ ಆಧಾರದ ಮೇಲೆ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡಲಾಗು­ವುದು.

ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಮೊದಲ ವರ್ಷದ ಪದವಿ ಅಥವಾ ಡಿಪ್ಲೊಮಾಗೆ ಸೇರಿದವರು ಅರ್ಜಿ ಹಾಕಬಹುದು.
ಪ್ರಸಕ್ತ ಸಾಲಿಗೆ ಈ ಯೋಜನೆಯಡಿ ಅರ್ಜಿ ಕರೆಯಲಾಗಿದೆ. ಸವಲತ್ತಿನ ಅಗತ್ಯವಿರುವವರು ಎಐಸಿಟಿಇ ವೆಬ್‌­ಸೈಟ್‌­ನಿಂದ ಅರ್ಜಿಯನ್ನು ಡೌನ್‌­­ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT