ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗಳಲ್ಲಿ ಎಲೆಕ್ಟ್ರಾನಿಕ್‌ ಟೋಲ್‌ ಜಾರಿ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಇದೇ ೨೭ರಿಂದ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ (ಇಟಿಸಿ) ವ್ಯವಸ್ಥೆ ಜಾರಿಗೆ ಬರಲಿದೆ.
ಟೋಲ್‌ ಸಂಗ್ರಹದಲ್ಲಿ ಪಾರದ­ರ್ಶಕತೆ ಮೂಡಿಸುವ ಉದ್ದೇಶದಿಂದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿ­ವಾಲಯ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಅ.೨೭­ರಂದು ದೆಹಲಿ–ಮುಂಬೈ ಮಾರ್ಗ­ದಲ್ಲಿ ಈ ವ್ಯವಸ್ಥೆಯನ್ನು ಉದ್ಘಾಟಿ­ಸುವರು. ಅದೇ ದಿನ ಇನ್ನೂ ಹಲವು ಕಡೆ ಇದು ಜಾರಿಗೆ ಬರಲಿದೆ. ೫೫ ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಈಗಾಗಲೇ ಇಟಿಸಿ ಅಳವಡಿಸಲಾಗಿದೆ.

ಭವಿಷ್ಯದ ಹೆದ್ದಾರಿ ಯೋಜನೆಗಳ ಗುತ್ತಿಗೆ ಕರಾರಿನಲ್ಲಿ ಇಟಿಸಿ ಅಳವಡಿಕೆ­ಯನ್ನು ಕಡ್ಡಾಯಗೊಳಿಸುವ ಪರಿಚ್ಛೇದ ಸೇರಿಸಲು ಸಚಿವಾಲಯ ಆದೇಶಿಸಿದೆ. ದೇಶದಾದ್ಯಂತ ಇಟಿಸಿ ಅಳವಡಿಸಲು ಸಚಿವಾಲಯವು ಭಾರತೀಯ ಹೆದ್ದಾರಿ­ಗಳ ನಿರ್ವಹಣೆ ನಿಯಮಿತ ಎನ್ನುವ ಹೊಸ ಸಂಸ್ಥೆಯನ್ನು ಸ್ಥಾಪಿಸಿದೆ.

ದುಬಾರಿ ಶುಲ್ಕ ವಿಧಿಸುವುದು,  ಸಂಗ್ರಹ­ಕಾರರು ಸರಿಯಾಗಿ ಲೆಕ್ಕ ನೀಡದಿರುವುದು ಸೇರಿದಂತೆ ಈಗಿರುವ ಟೋಲ್‌್ ಸಂಗ್ರಹ ವ್ಯವಸ್ಥೆಯ ಬಗ್ಗೆ ಹಲವು ದೂರುಗಳು ಬಂದ ಕಾರಣ ಇಟಿಸಿ ಅಳವಡಿಕೆಗೆ ನಿರ್ಧರಿಸಲಾಗಿತ್ತು. ಈ ಸಂಬಂಧ ೨೦೧೦ರಲ್ಲಿ ಕೇಂದ್ರವು ನಂದನ್‌್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ಆಧರಿಸಿ ಸಚಿವಾಲಯವು ದೇಶದಾದ್ಯಂತ ಇಟಿಸಿ ವ್ಯವಸ್ಥೆ ಜಾರಿಗೆ ತರುತ್ತಿದೆ.

ಇಟಿಸಿ ಜಾರಿಗಾಗಿ  ವಾಹನಗಳ ಮೇಲೆ ರೇಡಿಯೊ ತರಂಗಾಂತರ ಪತ್ತೆ ಸಾಧನ  (ಆರ್‌ಎಫ್‌ಐಡಿ) ಅಳವಡಿಸ­ಬೇಕಾ­­ಗುತ್ತದೆ. ಇದಕ್ಕಾಗಿ  ೧೯೮೯ರ ಕೇಂದ್ರ ಮೋಟಾರು ವಾಹನ ನಿಯಮಕ್ಕೆ ಅಗತ್ಯ ತಿದ್ದುಪಡಿ ತರಲಾಗಿದೆ. ಎಲ್ಲ ಹೆದ್ದಾರಿಗಳಲ್ಲಿ ಏಕರೂಪದ  ಹಾಗೂ ನಿಗದಿತ ದರದ ಟೋಲ್‌ ಸಂಗ್ರಹ ಮತ್ತು ಟೋಲ್‌ ಕೇಂದ್ರದಲ್ಲಿ ವಾಹನಗಳ ದಟ್ಟಣೆ ತಪ್ಪಿಸುವುದಕ್ಕೆ ನೂತನ ವ್ಯವಸ್ಥೆ ನೆರವಾಗಲಿದೆ.
ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ೩೪೭ ಟೋಲ್‌ ಸಂಗ್ರಹ ಕೇಂದ್ರಗಳ ಪೈಕಿ 55ರಲ್ಲಿ ಇಟಿಸಿ ಅಳವಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT