ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಪಕ್ಕದಲ್ಲೇ ಕಸದ ರಾಶಿ

ಬಿಬಿಎಂಪಿ ವಿರುದ್ಧ ಬಾಶೆಟ್ಟಿಹಳ್ಳಿ ಗ್ರಾಮಸ್ಥರ ಆಕ್ರೋಶ: ತೆರವಿಗೆ ಒತ್ತಾಯ
Last Updated 27 ನವೆಂಬರ್ 2015, 11:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಸಮೀಪ ಹೊಸಹುಡ್ಯ ಗೇಟ್ ಬಳಿ ಹೆದ್ದಾರಿ ಪಕ್ಕದಲ್ಲಿಯೇ ಬಿಬಿಎಂಪಿಯ ಕಸದ ರಾಶಿ ಸುರಿದು ಹೋಗಿರುವ ಘಟನೆ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ತಾಲೂಕಿನ ಬಿಬಿಎಂಪಿ ಕಸ ವಿಲೇವಾರಿ ಘಟಕಗಳಾದ ಟೆರಾಫರ್ಮಾ, ಎಂಎಸ್‌ಜಿಪಿಗಳಲ್ಲಿ ಕಸ ವಿಲೇವಾರಿ ಸ್ಥಗಿತಗೊಳಿಸುವಂತೆ ಹೋರಾಟ ನಡೆಯುತ್ತಿರುವುದು ಇನ್ನೂ ಹಸಿರುವಾಗಿರುವಾಗಲೇ ಹೆದ್ದಾರಿ ಪಕ್ಕದಲ್ಲಿಯೇ ಕಸದ ರಾಶಿ ಬಿದ್ದಿದೆ. ಇತ್ತೀಚೆಗಷ್ಟೇ ದೇವನಹಳ್ಳಿ ಬಳಿ ಸಹ ಬಿಬಿಎಂಪಿ ಕಸವನ್ನು ರಸ್ತೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಬಳಿ ಹೆದ್ದಾರಿ ಪಕ್ಕದಲ್ಲಿಯೇ ಸುರಿದಿರುವ ಕಸದ ರಾಶಿ.

ಸುರಿದುಹೋಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ಈಗ ಬೆಂಗಳೂರು ಹಿಂದೂಪುರ ಹೆದ್ದಾರಿಯ ದೊಡ್ಡಬಳ್ಳಾಪುರದ ಸಮೀಪವೇ ಕಸದ ರಾಶಿಗಳನ್ನು ಸುರಿದಿರುವುದು ಸಾರ್ವಜನಿಕರನ್ನು ಕೆರಳಿಸಿದೆ.

ಇತ್ತೀಚೆಗಷ್ಟೇ ಟೆರಾಫರ್ಮಾ, ಎಂಎಸ್‌ಜಿಪಿಗಳನ್ನು ಸ್ಥಗಿತಗೊಳಿಸಬೇಕು. ತಾಲ್ಲೂಕಿಗೆ ಯಾವುದೇ ಕಾರಣಕ್ಕೂ ಕಸದ ಲಾರಿಗಳು ಬರಬಾರದು ಎಂದು ಸುತ್ತಮುತ್ತ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು.

ಮುಖ್ಯಮಂತ್ರಿಗಳು ಮಾರ್ಚ್‌ನಿಂದ ಟೆರಾಫರ್ಮಾ ಘಟಕ ಸ್ಥಗಿತಗೊಳಿಸುವ ಬಗ್ಗೆ ಭರವಸೆ ನೀಡಿದ್ದರು. ಆನಂತರ ಕಸದ ಲಾರಿಗಳು ವಿಲೇವಾರಿ ಘಟಕಕ್ಕೆ ಬರಲು ಅನುವು ಮಾಡಿಕೊಡಲಾಗಿತ್ತು. ಆದರೂ ಹೆದ್ದಾರಿಯಲ್ಲಿಯೇ ಲಾರಿಗಳಿಂದ ಕಸ ಸುರಿಯಲಾಗುತ್ತಿದೆ. ಕೂಡಲೇ ರಸ್ತೆ ಬದಿಯಲ್ಲಿರುವ ಕಸವನ್ನು ತೆರವು ಮಾಡಬೇಕು. ಮುಂದೆ ಇಂತಹ ಕೃತ್ಯಗಳನ್ನು ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು  ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT