ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ: ರೇವಣ್ಣಗೆ ಪ್ರತಿಭಟನೆ ಬಿಸಿ

Last Updated 8 ಫೆಬ್ರುವರಿ 2016, 20:03 IST
ಅಕ್ಷರ ಗಾತ್ರ

ಬೆಂಗಳೂರು:  ಹೆಬ್ಬಾಳ ಉಪ ಚುನಾ ವಣೆಯ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ಮುಖಂಡ, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರಿಗೆ ಕೆಲವರು ಧಿಕ್ಕಾರ ಕೂಗಿದ ಪ್ರಸಂಗ ಸೋಮವಾರ ನಡೆಯಿತು.

ರೇವಣ್ಣ ಅವರು ಆರ್.ಟಿ. ನಗರ ವ್ಯಾಪ್ತಿಯಲ್ಲಿ ಪ್ರಚಾರದಲ್ಲಿ ತೊಡಗಿ ದ್ದರು. ಆಗ, ಬೈರತಿ ಸುರೇಶ್‌ ಬೆಂಬ­ಲಿಗರು ಎನ್ನಲಾದ ಕೆಲವರು ಅಲ್ಲಿಗೆ ಬಂದು ರೇವಣ್ಣ ವಿರುದ್ಧ ಘೋಷಣೆ ಕೂಗಿದರು. ಸುರೇಶ್ ಅವರನ್ನೂ ಪ್ರಚಾರಕ್ಕೆ ಕರೆತರ ಬೇಕಿತ್ತು ಎಂದು ಅವರು ಹೇಳಿದರು.

ನಂತರ ಈ ಕುರಿತು ಮಾಧ್ಯಮ­ಗಳಿಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ‘ಸುರೇಶ್ ಅವರು ಕಾಂಗ್ರೆಸ್ಸಿಗೆ ಅನಿವಾರ್ಯವೇನೂ ಅಲ್ಲ. ಪಕ್ಷ ಸೂಚಿಸುವುದನ್ನು ಮನೆ ಕೆಲಸ ಎಂಬಂತೆ ಮಾಡಬೇಕು. ಪಕ್ಷದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಬಾರದು’ ಎಂದು ಹೇಳಿದರು.

ಸಿ.ಎಂ ಪ್ರಚಾರ: ತುಮಕೂರಿನಿಂದ ಸೋಮವಾರ ಸಂಜೆ ಬೆಂಗಳೂರಿಗೆ ಬಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೆಬ್ಬಾಳ ಕ್ಷೇತ್ರಕ್ಕೆ ತೆರಳಿ, ಪಕ್ಷದ ಅಭ್ಯರ್ಥಿ ರೆಹಮಾನ್ ಷರೀಫ್ ಪರ ಪ್ರಚಾರ ನಡೆಸಿದರು.

ಪ್ರಚಾರದ ಭಾಗವಾಗಿ, ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ, ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸುವ ಯತ್ನ ನಡೆಸಿದರು. ‘ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಕೆಲಸ ಮಾಡಬೇಕು. ಅಸಮಾಧಾನ ಗಳನ್ನೆಲ್ಲ ಚುನಾವಣೆ ನಂತರ ಬಗೆಹರಿಸಿ ಕೊಳ್ಳಬಹುದು’ ಎಂದು ತಾಕೀತು ಮಾಡಿದರು ಎನ್ನಲಾಗಿದೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಮಯ್ಯ, ‘ಹೆಬ್ಬಾಳದಲ್ಲಿ ಜೆಡಿಎಸ್ ಪರ ಪ್ರಚಾರ ದಲ್ಲಿ ತೊಡಗುವುದಿಲ್ಲ ಎಂದು ಆ ಪಕ್ಷದ ಮುಖಂಡ, ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿರುವುದು ಸರಿಯಾಗಿದೆ. ಅವರ ನಿಲುವನ್ನು ನಾನು ಸ್ವಾಗತಿ ಸುತ್ತೇನೆ’ ಎಂದು ಹೇಳಿದರು.

ಬೈರತಿ ಸುರೇಶ್ ಕಾಂಗ್ರೆಸ್ಸಿಗೆ ಅನಿ ವಾರ್ಯವಲ್ಲ ಎಂದು ರೇವಣ್ಣ ಹೇಳಿ­ರುವ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾ­ಮಯ್ಯ, ‘ನಾನೂ ಸೇರಿದಂತೆ ಕಾಂಗ್ರೆಸ್ಸಿಗೆ ಯಾರೂ ಅನಿವಾರ್ಯ ಅಲ್ಲ’ ಎಂದರು.

ಪಾದಯಾತ್ರೆ: ಸಚಿವರಾದ ಡಿ.ಕೆ.ಶಿವ ಕುಮಾರ್‌, ರಾಮಲಿಂಗಾರೆಡ್ಡಿ, ರಾಜ್ಯ ಸಭಾ ಸದಸ್ಯ ರಾಜೀವ್‌ ಗೌಡ, ಪರಿಷತ್‌ ಸದಸ್ಯ ಎಂ.ಆರ್‌. ಸೀತಾರಾಮ್‌ ಸೇರಿ ದಂತೆ ಇತರ ಮುಖಂಡರು ಗೆದ್ದಲಹಳ್ಳಿ ಭಾಗದಲ್ಲಿ ಪಾದಯಾತ್ರೆ ಮಾಡಿ, ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT