ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌್ ಹಗರಣ ಎನ್‌ಡಿಎ ಬುಡಕ್ಕೆ?

ಮಾಜಿ ರಾಜ್ಯಪಾಲರ ಹೇಳಿಕೆ
Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಹು ಕೋಟಿ ಮೌಲ್ಯದ ಆಗಸ್ಟಾವೆಸ್ಟ್‌ಲ್ಯಾಂಡ್‌ ಹೆಲಿ­ಕಾಪ್ಟರ್‌ ಖರೀದಿ ಹಗರಣವು ಎನ್‌ಡಿಎ ಕೊರಳಿಗೆ ಸುತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಹಗರಣಕ್ಕೆ  ಸಂಬಂಧಿಸಿ ಸಿಬಿಐ ಮುಂದೆ ಹೇಳಿಕೆ ನೀಡಿರುವ ಮಾಜಿ ರಾಜ್ಯ­ಪಾಲರಾದ ಎಂ.ಕೆ.­ನಾರಾ­ಯ­ಣನ್‌್ ಹಾಗೂ ಬಿ.ವಿ.ವಾಂಛೂ, ‘ಹೆಲಿ­ಕಾಪ್ಟ­ರ್‌ಗಳು ಹಾರಾಡುವ ಗರಿಷ್ಠ ಎತ್ತ­ರದ ಮಿತಿಯನ್ನು 18,000 ಅಡಿ­ಯಿಂದ 15,000 ಅಡಿಗೆ ಇಳಿಸಲು  2003ರಲ್ಲಿ ಎನ್‌ಡಿಎ ಸರ್ಕಾರ ಅಧಿ­ಕಾರ­­ದಲ್ಲಿದ್ದಾಗ ನಿರ್ಧಾರ ತೆಗೆದು­ಕೊಳ್ಳ­ಲಾ­ಗಿತ್ತು’ ಎಂದು ತಿಳಿಸಿದ್ದಾರೆ.

ಹರಾಜು  ಪ್ರಕ್ರಿಯೆಯಲ್ಲಿ ಪೈಪೋಟಿ­ಯನ್ನು ಉತ್ತೇಜಿಸ­ಬೇಕು ಹಾಗೂ ಅತಿ­ಗಣ್ಯರ ಹೆಲಿಕಾಪ್ಟರ್‌ ಖರೀದಿ ಸಂಬಂಧ 70ರ ದಶಕದಲ್ಲಿ ರೂಪಿಸಿದ್ದ ನಿಯಮ­ಗಳಿಗೆ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಹೆಲಿ­ಕಾಪ್ಟರ್‌ ಹಾರಾ­ಟದ ಮಿತಿ ಇಳಿಸಲು ನಿರ್ಧರಿಸಲಾಗಿತ್ತು
ಈ ಸಂಬಂಧ 2003ರಲ್ಲಿ ಪ್ರಧಾನಿ ಕಚೇರಿ ಪ್ರಮುಖ ಅಧಿಕಾರಿಗಳು ಸಭೆ ನಡೆಸಿದ್ದಾಗಿ ವಾಂಛೂ ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಹೆಲಿಕಾಪ್ಟರ್‌ಗಳ ಹಾರಾಟದ ಎತ್ತರ­ತಗ್ಗಿಸುವ ಬಗ್ಗೆ 2005ರ ಮಾರ್ಚ್‌­ನಲ್ಲಿ (ಮನಮೋಹನ್‌ ಸಿಂಗ್‌ ಸರ್ಕಾರ) ಕೂಡ ಸಭೆ ನಡೆದಿತ್ತು.  ಈ  ಸಭೆ­ಯಲ್ಲಿ ನಾರಾಯ­ಣನ್‌ ಹಾಗೂ ವಾಂಛೂ  ಇದ್ದರು. ಇದೇ ಕಾರಣಕ್ಕೆ ಇವ­ರಿ­ಬ್ಬರನ್ನು ಸಿಬಿಐ ಪ್ರಶ್ನೆಗೊಳ­ಪಡಿ­ಸಿದೆ.

‘ಹರಾಜಿನಲ್ಲಿ  ಆಗಸ್ಟಾ­ವೆಸ್ಟ್‌­ಲ್ಯಾಂಡ್ ಪಾಲ್ಗೊ­ಳ್ಳುವಂತೆ ಅನು­ಕೂಲ ಮಾಡಿ­ಕೊ­ಡಲು ಹಾರಾಟ ಮಿತಿ ಇಳಿ­ಸುವ ನಿರ್ಧಾರ ತೆಗೆದು­ಕೊಳ್ಳ­ಲಾಗಿತ್ತು’ ಎನ್ನುವುದು ಸಿಬಿಐ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT