ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಗೆ ಸಂಭ್ರಮಿಸಲಿ?

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಎಲ್ಲಿದೆ ‘ಸಿಹಿಯ’ ಹಾದಿ?
ಬೆಲೆಗಳೆಲ್ಲ ಗಗನಕ್ಕೇರಿ
ಮುಟ್ಟಿದ್ದೆಲ್ಲ ‘ಕಹಿ’ಯಾಗು­ತ್ತಿರು­ವಾಗ!
ಎಲ್ಲಿದೆ ‘ಸಿಹಿಯ’ ಮಾತು?
ಮತ ಮತ್ಸರಗಳ ನಡುವೆ
ಮೌಢ್ಯವೂ ‘ಕೇಕೆ’ ಹಾಕು­ತ್ತಿರು­ವಾಗ!
ಎಲ್ಲಿದೆ ‘ನ್ಯಾಯದ’ ಕಾಲ?

ಬೇಲಿಯೇ ಎದ್ದು ಹೊಲ ಮೇಯ್ದು
‘ಅಟ್ಟಹಾಸ’ ಮೆರೆಯುತ್ತಿ­ರು­ವಾಗ!
ಎಲ್ಲಿದೆ ‘ಆಶಯದ’ ಹಣತೆ?
ಸ್ವಾರ್ಥ, ಭ್ರಷ್ಟಾಚಾರ, ಭಿನ್ನ­ಮತದ ‘ಕತ್ತಲೆಯೇ’ ತುಳುಕುತ್ತಿರುವಾಗ!
ಹೇಗೆ ಸಂಭ್ರಮಿಸಲಿ?

ಹಬ್ಬ ಹರಿದಿನಗಳ ಸಡಗರ
ಬರದ ಬಿಸಿಗೆ ‘ಬದುಕೇ ಬಿರುಕು’
ಬಿಟ್ಟಿರುವಾಗ!
– ಅನಾರ್ಕಲಿ ಸಲೀಂ ಚಿಣ್ಯ  ಶ್ರೀರಂಗಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT