ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾ ಹೇಳಿಕೆಗೆ ಆಕ್ರೋಶ

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪಶ್ಚಿಮ ಬಂಗಾಲ ಮತ್ತು ಬಿಹಾರದ ವಿಧವೆಯರು ಮಥುರಾದಲ್ಲಿ ನೆಲೆ ಕಂಡುಕೊಳ್ಳ­ಬಾ­ರದು ಎಂಬ ಸಂಸದೆ ಹೇಮಾಮಾಲಿನಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

ವೃಂದಾವನ ವಿಧವೆಯರ ಬಗ್ಗೆ ಹೇಮಾಮಾಲಿನಿ ಅವರ ಹೇಳಿಕೆ ಸಂಕು­ಚಿತ ಮನೋಭಾವದಿಂದ ಕೂಡಿದೆ ಮತ್ತು ಅನಪೇಕ್ಷಿತವಾಗಿತ್ತು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

‘ಎನ್‌ಜಿಒ ಸೇವೆಯ ಕೂಟ’ದ ಅಧ್ಯಕ್ಷೆ  ಹಾಗೂ ವೃಂದಾವನದಲ್ಲಿ ‘ಅಮರ್‌ ಬರಿ ಆಶ್ರಮ’ ನಡೆಸುತ್ತಿ­ರುವ ಮೋಹಿನಿ ಗಿರಿ ಅವರು ಹೇಮಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನವದೆಹಲಿ ಮೂಲದ ‘ಮೈತ್ರಿ ಇಂಡಿಯಾ’ ಎನ್‌ಜಿಒದ ಮುಖ್ಯಸ್ಥೆ ಸೋನಾಲ್‌ ಸಿಂಗ್‌ ವಾಧ್ವಾ ಅವರೂ ಹೇಮಾ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಷಮೆಗೆ ಆಗ್ರಹ: ತಮ್ಮ ಹೇಳಿಕೆ ಬಗ್ಗೆ ಸಂಸದೆ ಹೇಮಾಮಾಲಿನಿ ಅವರು ಮಥುರಾದ ವಿಧವೆಯರ ಕ್ಷಮೆ ಯಾಚಿಸಬೇಕು ಎಂದು ಬಿಹಾರದ ಸಮಾಜ ಕಲ್ಯಾಣ ಸಚಿವರಾದ ಲೇಸಿ ಸಿಂಗ್‌ ಆಗ್ರಹಿಸಿದ್ದಾರೆ.

ಸಂಸದೆಯಾಗಿ ಹೇಮಾಮಾಲಿನಿ ನೀಡಿರುವ ಹೇಳಿಕೆ ಮಹಿಳೆಯರಿಗೆ ಮಾಡಿರುವ ಅವಮಾನ  ಹಾಗೂ ಪ್ರತಿಯೊಬ್ಬ­ರಿಗೂ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಹೇಮಾ ಸಮರ್ಥನೆ: ಮಥುರಾ­ದಲ್ಲಿನ ವಿಧವೆಯರ ಬಗ್ಗೆ  ಬುಧವಾರ ತಾವು ನೀಡಿರುವ ಹೇಳಿಕೆಯನ್ನು ಹೇಮಾಮಾಲಿನಿ  ಸಮರ್ಥಿಸಿ­ಕೊಂಡಿದ್ದಾರೆ.

ಪಶ್ಚಿಮ ಬಂಗಾಲ ಮತ್ತು ಬಿಹಾರ­ದಲ್ಲಿ ಸರ್ಕಾರ ವಿಧವೆ­ಯರನ್ನು ನಿರ್ಲಕ್ಷಿಸಿದ್ದು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿಲ್ಲ. ತಮ್ಮ ನೆಲದಲ್ಲೇ ಅವರು ಘನತೆಯಿಂದ ಬದುಕುವಂತಾಗಬೇಕು ಎಂಬುದು ತಮ್ಮ ಹೇಳಿಕೆಯ ಆಶಯ ಎಂದು ಗುರುವಾರ ಟ್ವೀಟರ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT