ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರಿಕೆ ನಿಲ್ಲಲಿ

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಒಬ್ಬ ಗ್ರಾಹಕ ರಾಷ್ಟ್ರ ಮಟ್ಟದ ಬ್ಯಾಂಕೊಂದಕ್ಕೆ ಹೋಗಿ ಕನ್ನಡದಲ್ಲಿ ಮಾತನಾಡಿದಾಗ, ಹಿಂದಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಒರಟಾದ ಪ್ರತಿಕ್ರಿಯೆ ಸಿಕ್ಕಿದೆ. ಇದು ಯಾವುದೋ ಒಂದು ಬ್ಯಾಂಕಿನಲ್ಲಿ ನಡೆಯುವ ಸಂಗತಿಯಲ್ಲ, ಹೆಚ್ಚು ಕಡಿಮೆ ಎಲ್ಲ ಬ್ಯಾಂಕುಗಳಲ್ಲೂ ಇದೇ ಸ್ಥಿತಿ ಇದೆ.

ಇದಕ್ಕೆ ಕಾರಣವೇನೆಂಬುದು ಬ್ಯಾಂಕಿನ ನೌಕರಿಗೆ  ನಡೆಯುವ ಪ್ರವೇಶ ಪರೀಕ್ಷೆಗಳನ್ನು ನೋಡಿದರೆ ತಿಳಿಯುತ್ತದೆ. ಇಂತಹ ಪರೀಕ್ಷೆಗಳನ್ನು ಹಿಂದಿ ಇಲ್ಲವೇ ಇಂಗ್ಲಿಷ್‌ನಲ್ಲಿ ಬರೆಯಬೇಕೆಂಬ ಕಟ್ಟಲೆಯಿದೆ. ಇದರಿಂದ ಈ ಭಾಷೆಗಳನ್ನು ಬಲ್ಲವರಿಗೇ ಹೆಚ್ಚಾಗಿ ಕೆಲಸ ದೊರೆಯುತ್ತದೆ.

ಅವರು ಹಲವು ರಾಜ್ಯಗಳಿಗೆ ಕೆಲಸದ ಮೇಲೆ ವರ್ಗವಾಗಿ ಹೋಗುತ್ತಾರೆ. ಆದರೆ ದೇಶದಲ್ಲಿ ಹಿಂದಿ, ಇಂಗ್ಲಿಷ್‌ ಎರಡೂ ಬಾರದ ಎಷ್ಟೋ ಮಂದಿ ಇದ್ದಾರೆ. ಅಂತಹವರು ತಮ್ಮ ಭಾಷೆ ತಿಳಿಯದೆ ಈ ಭಾಷೆಗಳಲ್ಲಷ್ಟೇ  ವ್ಯವಹರಿಸಬಲ್ಲ ಬ್ಯಾಂಕಿನ ಸಿಬ್ಬಂದಿ ಜೊತೆ ವ್ಯವಹರಿಸಲು ಸಾಧ್ಯವಾಗುವುದಿಲ್ಲ.

ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ವಿಧಿಯಲ್ಲಿ ಅಡಕವಾಗಿರುವ  ಕನ್ನಡ ಸೇರಿದಂತೆ  ಎಲ್ಲಾ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸುವುದೇ ಈ ಸಮಸ್ಯೆಗೆ ಮದ್ದು. ಇದರ ಜೊತೆಗೆ ಬ್ಯಾಂಕಿಂಗ್ ವಿಷಯ ರಾಜ್ಯದ ಪಟ್ಟಿಗೆ ಸೇರಿದರೆ ಆಗ ರಾಜ್ಯ ಭಾಷೆಗಳಿಗೆ ಈ ಬಗೆಯ ತೊಂದರೆ ಕಾಣಿಸಿಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT