ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ಸ್ಪೋಟ: ಐಎಂ ಸದಸ್ಯನ ಕೈವಾಡ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಳೆದ ವರ್ಷ ಹೈದರಾಬಾದ್‌ನ ದಿಲ್‌ಸುಖ್‌ನಗರ­ದಲ್ಲಿ ನಡೆಸಲಾದ ಸ್ಫೋಟದ ಯೋಜನೆ ಮತ್ತು ಕಾರ್ಯದಲ್ಲಿ ತೆಹ್ಸಿನ್‌ ಅಖ್ತರ್‌ ಮತ್ತು ಜಿಯಾ–ಉರ್‌–ರೆಹಮಾನ್‌ ಅಲಿಯಾಸ್‌ ವಕಾಸ್‌ ಎಂಬ ಇಂಡಿ­ಯನ್‌ ಮುಜಾಹಿದೀನ್‌ (ಐಎಂ) ಕಾರ್ಯಕರ್ತರು ಸಕ್ರಿಯ­ವಾಗಿ ಭಾಗಿ­ಯಾ­ಗಿದ್ದರು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಲ್ಲಿ ಗುರು­ವಾರ ಕೋರ್ಟ್‌ ಎದುರು ಹೇಳಿದೆ.

ತೆಹ್ಸಿನ್‌, ವಕಾಸ್‌ ಇಬ್ಬರೂ ಫೆ.­21­ರಂದು ದಿಲ್‌­ಸುಖ್‌­ನಗರ ಸ್ಫೋಟ ಸೇರಿ­ದಂತೆ ಅನೇಕ ಸ್ಫೋಟ ಪ್ರಕ­ರಣ­ಗಳಲ್ಲಿ ನೇರವಾಗಿ ಭಾಗಿ­­ಯಾಗಿ­ದ್ದಾರೆ. ಆದ್ದ­ರಿಂದ ಇವರಿ­ಬ್ಬ­ರನ್ನು ತಮ್ಮ ವಶಕ್ಕೆ ಒಪ್ಪಿಸ­ಬೇಕು ಎಂದು ಎನ್‌ಐಎ ಹೈದರಾಬಾದ್‌ ಘಟಕ ಕೋರ್ಟ್‌ಗೆ ಮನವಿ ಮಾಡಿತು.

‘ಈ ಪಿತೂರಿ ಯೋಜಿಸುವಲ್ಲಿ  ಮತ್ತು ಆಧುನಿಕ ಸ್ಫೋಟಕ ಸಾಧನ (ಎಲ್‌ಇಡಿ) ಸಂಗ್ರಹಿಸುವಲ್ಲಿ ವಕಾಸ್‌ ಸಕ್ರಿಯವಾಗಿ ಭಾಗವಹಿಸಿದ್ದ. ಸೈಕಲ್‌­ಗೆ ಇವುಗಳನ್ನು ಜೋಡಿಸು­ವಲ್ಲೂ ಪ್ರಮುಖ ಪಾತ್ರ ವಹಿಸಿದ್ದ’ ಎಂದು ಎನ್‌ಐಎ ಹೇಳಿದೆ.

ವಶಕ್ಕೆ ಪಡೆದು­ಕೊಂಡು ನಡೆಸುವ ವಿಚಾರಣೆಯಿಂದ ಈಗಾ­ಗಲೇ ಸಂಗ್ರಹಿ­ಸಿದ್ದ ಸಾಕ್ಷ್ಯಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಅಲ್ಲದೇ ಗುರುತು ಪರೀಕ್ಷೆಯಂತಹ ತನಿಖೆಗಳ ಮೂಲಕ ಆರೋಪಿಗಳ ವಿರುದ್ಧ ಹೊಸ ಸಾಕ್ಷ್ಯಗಳನ್ನು ಸಂಗ್ರಹಿ­ಸಲೂ ಸಾಧ್ಯವಾ­ಗುತ್ತದೆ’ ಎಂದು ಎನ್‌ಐಎ ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT