ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಸ್ಪೀಡ್‌ ರೈಲು: ಚೀನಾ ಸಹಕಾರ

ಮೈಸೂರು–ಬೆಂಗಳೂರು–ಚೆನ್ನೈ
Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಮಹತ್ವದ ಬೆಳವಣಿಗೆ­ಯೊಂದರಲ್ಲಿ ಭಾರತೀಯ ರೈಲ್ವೆಯು ಚಾಲ್ತಿಯಲ್ಲಿರುವ ರೈಲು ಮಾರ್ಗ­ಗಳನ್ನು ಹೈಸ್ಪೀಡ್‌ ಮಾರ್ಗ­ಗಳಾಗಿ ಮೇಲ್ದರ್ಜೆ­ಗೇರಿಸುವ ಸಂಬಂಧ ಚೀನಾ­ದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ.

ಅದರಂತೆ ಮೊದಲ ಹಂತ­ದಲ್ಲಿ ಮೈಸೂರು–ಬೆಂಗಳೂರು–ಚೆನ್ನೈ ಮಾರ್ಗ­ವನ್ನು ಹೈಸ್ಪೀಡ್‌ ಮಾರ್ಗವಾಗಿ ಮಾರ್ಪ­ಡಿಸಲು ರೈಲ್ವೆ ಗುರುತಿಸಿ­ರು­ವುದು ಪ್ರಮುಖ ಅಂಶ. ಈಗ ಇರುವ ರೈಲು ಸಂಚಾರದ ವೇಗ ಗಂಟೆಗೆ 160 ಕಿ.ಮೀ.ಗೆ ಮೇಲ್ದರ್ಜೆಗೇರಲಿದೆ.

ಕ್ರಿಯಾ ಯೋಜನೆಯಂತೆ ಉದ್ದೇಶಿತ ರೈಲು ಮಾರ್ಗಗಳ ವಿನ್ಯಾಸ ಮತ್ತು ಸಮೀಕ್ಷೆಯನ್ನು ಚೀನಾ ಕೈಗೊಳ್ಳಲಿದ್ದು ಹೈಸ್ಪೀಡ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಸಿಬ್ಬಂದಿಗೆ ತರಬೇತಿ­ಯನ್ನೂ ನೀಡಲಿದೆ. 20 ಮಂದಿಯಂತೆ ಐದು ತಂಡಗಳಿಗೆ ಎರಡರಿಂದ ಮೂರು ವಾರಗಳ ಕಾಲಾವಧಿಯ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಹೈಸ್ಪೀಡ್‌ ಯೋಜನೆಯನ್ನು ಚೀನಾ ರೈಲ್ವೆ ಇರ್ಯು­ವಾನ್‌ ಎಂಜಿನಿಯರಿಂಗ್‌ ಗ್ರೂಪ್‌, ರೈಲು ವಿಕಾಸ ನಿಗಮದ ಘಟಕವಾದ ಹೈಸ್ಪೀಡ್‌ ರೈಲು ನಿಗಮದ ಜೊತೆಗೂಡಿ ಅನುಷ್ಠಾನಗೊಳಿಸಲಿದೆ. ಬೀಜಿಂಗ್‌ ಜಿಯಾಟೊಂಗ್‌ ವಿಶ್ವವಿದ್ಯಾಲಯವು ಮೊದಲ ಹಂತದ ತರಬೇತಿಯನ್ನು ಮುಂದಿನ ತಿಂಗಳು ಆರಂಭಿಸಲಿದೆ.

ವಿಶ್ವದರ್ಜೆಗೆ ಬೆಂಗಳೂರು ನಿಲ್ದಾಣ:  ಅತ್ಯಾ­ಧುನಿಕ ಸೌಕರ್ಯಗಳನ್ನು ಒಳ­ಗೊಂಡ ವಿಶ್ವದರ್ಜೆಯ   ನಿಲ್ದಾಣ­ಗ­ಳಾಗಿ ಮಾರ್ಪಡಿಸುವ ಯೋಜನೆಗೆ ಬೆಂಗ­ಳೂರು ಮತ್ತು ಭುವನೇಶ್ವರದ ರೈಲು ನಿಲ್ದಾಣಗಳನ್ನು ಆಯ್ಕೆ ಮಾಡ­ಲಾಗಿದೆ. ಈ ಸಂಬಂಧ  ಅಧ್ಯಯನ ವರದಿ ಸಿದ್ಧಪಡಿಸಲು ಚೀನಾ ಸಮ್ಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT