ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ– ಕ ಭಾಗಕ್ಕೆ ಶೀಘ್ರವೇ ಸೌಲಭ್ಯ: ತಂಗಡಗಿ

Last Updated 17 ಸೆಪ್ಟೆಂಬರ್ 2014, 6:56 IST
ಅಕ್ಷರ ಗಾತ್ರ

ಕಾರಟಗಿ: ಕೇಂದ್ರದ ಯುಪಿಎ ಸರ್ಕಾ­ರದ ಕೊಡುಗೆಯಾಗಿರುವ ಸಂವಿಧಾನದ 371 (ಜೆ) ಕಲಂ ತಿದ್ದುಪಡಿಯಲ್ಲಿನ ಕೆಲ ಲೋಪಗಳನ್ನು ಶೀಘ್ರವೇ ಸರಿಪಡಿಸಿ, ಈ ಭಾಗದ ಜನರಿಗೆ ಸಮರ್ಪಕ ಸೌಲಭ್ಯಗಳು ತಲುಪುವಂತೆ ಮಾಡಲಾ­ಗು­ವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಘಟಕವು ಜಮ್ಮು– ಕಾಶ್ಮೀರ ಸಂತ್ರಸ್ತರಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ನಿಧಿ ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾ­ಡಿದರು.

ಜಮ್ಮು ಕಾಶ್ಮೀರದ ಜನರು ಪ್ರವಾಹ­ದಿಂದ ಸಾಕಷ್ಟು ಹಾನಿ ನೋವು ಅನುಭ­ವಿಸಿದ್ದಾರೆ. ನಾನಾ ಸಾಂಕ್ರಾಮಿಕ ರೋಗ­ದಿಂದ ಬಳಲುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ನೆರವು ನೀಡು­ತ್ತಿವೆ. ಮಾನವೀಯತೆಯಿಂದ, ಅಲ್ಲಿನ ಜನರು ಶೀಘ್ರವೇ ಚೇತರಿಸಿ­ಕೊಳ್ಳಲಿ ಎಂಬ ಉದ್ದೇಶದಿಂದ ಪಕ್ಷ ಸೂಚಿ­ಸಿ­ದಂತೆ ಜಿಲ್ಲೆಯಲ್ಲಿ ನಿಧಿ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಿಂದ ಸುಮಾರು ₨ 3 ಲಕ್ಷ ಸಂಗ್ರಹಿಸುವ ಗುರಿ ಇದೆ ಎಂದು ಹೇಳಿದರು.
ಶಾಸಕ ಉಮೇಶ್ ಕತ್ತಿ ಅನು­ಭವಿಗಳು, ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕುರಿತು ಧ್ವನ ಎತ್ತಿರುವುದು ಸಾಧು ಕ್ರಮವಲ್ಲ ಎಂದು ಹೇಳಿ­ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಗ್ರಾಮ ಪಂಚಾ­ಯಿತಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಪ್ರಮುಖರಾದ ಕೆ. ಸಿದ್ಧನ­ಗೌಡ, ಶಿವರೆಡ್ಡಿ ನಾಯಕ, ವಿಶ್ವನಾಥ­ರಡ್ಡಿ ಹೊಸಮನಿ, ಹನುಮೇಶ್ ನಾಯಕ, ಬಿ. ಕಾಶಿವಿಶ್ವನಾಥ, ಅಂಭಣ್ಣ ನಾಯಕ, ಎಂ. ಸಂದೀಪಗೌಡ, ಶಿವರಡ್ಡಿ ನವಲಿ, ಜಂಭುನಾಥ ಇಟಗಿ, ಹನು­ಮಂತಪ್ಪ ಪನ್ನಾಪೂರ, ಹನುಮಂತಪ್ಪ ಬೇವಿನಾಳ, ದಾನನಗೌಡ, ಅಯ್ಯಪ್ಪ ಸಂಗಟಿ, ಸಿದ್ದಪ್ಪ ಬೇವಿನಾಳ, ಶರಣಪ್ಪ ಕಾಯಿಗಡ್ಡಿ, ಮರಿಸೂಗಪ್ಪ, ಸಿ. ಗದ್ದೆಪ್ಪ, ದಿವಟರ ಶರಣಪ್ಪ, ಪರಮೇಶ ಬೂದಗುಂಪಾ, ಉಮೇಶ್ ಭಂಗಿ, ಯುವ ಕಾಂಗ್ರೆಸ್ ಅಧ್ಯಕ್ಷ ಶರಣ­ಬಸವರಾಜ್, ಕಾರ್ಯದರ್ಶಿ ಅಯ್ಯಪ್ಪ ಉಪ್ಪಾರ್, ಬ್ಲಾಕ್ ಅಧ್ಯಕ್ಷರಾದ ಡಾ. ಕೆ. ಎನ್. ಪಾಟೀಲ್, ರೆಡ್ಡಿ ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT