ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ, ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Last Updated 1 ನವೆಂಬರ್ 2014, 11:18 IST
ಅಕ್ಷರ ಗಾತ್ರ

ರಾಮನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2014– -15ನೇ ಸಾಲಿನಲ್ಲಿ 6 ರಿಂದ 15 ವರ್ಷದ ಒಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲ­ಕರಿಗೆ ‘ಹೋಯ್ಸಳ ಪ್ರಶಸ್ತಿ’ ಹಾಗೂ ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ ಪ್ರಶಸ್ತಿ’ಯ ವಿತರಣೆಗಾಗಿ ಅರ್ಹ ಬಾಲಕ ಮತ್ತು ಬಾಲಕಿ­ಯರಿಂದ ಅರ್ಜಿ ಆಹ್ವಾನಿಸಿದೆ.

6 ರಿಂದ 15 ವರ್ಷ ವಯಸ್ಸಿಗಿಂತ ಕಡಿಮೆ ಮಯೋಮಿತಿ ಹೊಂದಿ­ರಬೇಕು. (ಸಾಧನೆ ಮಾಡಿದ ಪ್ರಕರ­ಣವು ಆಗಸ್ಟ್ 2013 ರಿಂದ ಜುಲೈ 2014 ರ ಒಳಗೆ ನಡೆದಿರಬೇಕು).ಈ ಸಾಧನೆಯು ಜಿಲ್ಲಾ ಮಟ್ಟದಲ್ಲಿ  ಗುರುತಿಸಿರಬೇಕು. ಧೈರ್ಯ ಶೌರ್ಯ­ವನ್ನು ಪ್ರದರ್ಶಿಸಿದ ಬಗ್ಗೆ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿರ­ಬೇಕು. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾ­ಯಿತಿ, ಶಾಲಾ ಶಿಕ್ಷಕರು ಸಾಧನೆ­ಯನ್ನು ಗುರುತಿಸಿ ಜಿಲ್ಲಾ ಮಟ್ಟಕ್ಕೆ ತಿಳಿಸಿರಬೇಕು.

ಲಗತ್ತಿಸಬೇಕಾದ ದಾಖಲೆಗಳು: ಅಭ್ಯರ್ಥಿಯು 2  ಭಾವಚಿತ್ರ, ಶೌರ್ಯ ಸಾಧನೆ ತೋರಿದ ಬಗ್ಗೆ ಪೊಲೀಸ್‌  ಇಲಾಖೆಯ ಪ್ರಾಥಮಿಕ ತನಿಖಾ ವರದಿ (ಎಫ್ಐಆರ್), ಜನ್ಮ­ದಿನಾಂಕದ ಬಗ್ಗೆ ಮಹಾನಗರ ಪಾಲಿಕೆ, ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಅಥವಾ ಶಾಲೆಯಿಂದ ಪಡೆದ ವರ್ಗಾವಣೆ ಪತ್ರ, ಧೈರ್ಯ, ಶೌರ್ಯ ತೋರಿದ ಬಗ್ಗೆ ಪತ್ರಿಕಾ ಪ್ರಕಟಣೆಗಳು.

ಅರ್ಜಿ ಹಾಗೂ ನಿಗದಿತ ದಾಖಲೆ­ಗಳನ್ನು ದ್ವಿಪ್ರತಿಯಲ್ಲಿ ಅಕ್ಟೋಬರ್‌ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080– -27273036 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT