ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತನಿಖಾ ಸಮಿತಿಗೆ ಮನವಿ

ಹೈಕೋರ್ಟ್‌ ನ್ಯಾಯಮೂರ್ತಿಯಿಂದ ಲೈಂಗಿಕ ಕಿರುಕುಳ ಪ್ರಕರಣ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಗ್ವಾಲಿಯರ್‌ನ ಮಾಜಿ ಜಿಲ್ಲಾ ನ್ಯಾಯಾ­ಧೀಶೆ, ಈ ಪ್ರಕರಣದ ತನಿಖೆ ನಡೆಸಲು ಮತ್ತೊಂದು ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಈಗಾಗಲೇ ರಚಿಸಲಾಗಿರುವ ತನಿಖಾ ಸಮಿತಿ ಕುರಿತು ಪ್ರಶ್ನೆಗಳು ಎದ್ದಿವೆ.

ಸುಪ್ರೀಂಕೋರ್ಟ್‌ಗೆ ಮಂಗಳವಾರ ಸಲ್ಲಿಸಿರುವ ಅರ್ಜಿಯಲ್ಲಿ ಈ ಮಹಿಳೆ, ತಾವು ಮಾಡಿರುವ ಆರೋಪಕ್ಕೆ ಸಂಬಂಧಿ­­ಸಿದಂತೆ ಇಬ್ಬರು ಹೈಕೋರ್ಟ್‌ ಮುಖ್ಯ­ನ್ಯಾಯ­ಮೂರ್ತಿ, ಒಬ್ಬ ಹೈಕೋರ್ಟ್‌ ನ್ಯಾಯಮೂರ್ತಿ ಇರುವ ತನಿಖಾ ಸಮಿತಿ ರಚಿಸುವಂತೆ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶ ಹೈ­ಕೋರ್ಟ್‌ ಆದೇಶ­ದಂತೆ ಆಗಸ್ಟ್‌ 8ರಂದು ರಚಿಸಲಾಗಿರುವ ನ್ಯಾಯಾಂಗ ಸಮಿತಿ­ಯಿಂದ ನ್ಯಾಯ ಸಿಕ್ಕುವ ಭರವಸೆ ಇಲ್ಲ. ಹಾಗಾಗಿ ಆ ಸಮಿತಿ ವಜಾಗೊಳಿಸಿ ಸುಪ್ರೀಂಕೋರ್ಟ್‌ ಹೊಸ ಸಮಿತಿ ರಚಿಸಬೇಕು ಎಂದಿದ್ದಾರೆ.

ತಮಗೆ ಲೈಂಗಿಕ ಕಿರುಕುಳ ನೀಡಿರುವ ನ್ಯಾಯಮೂರ್ತಿ ಈಗಲೂ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಆ ಘಟನೆಗೆ ಸಾಕ್ಷಿಯಾಗಿರುವ ತಮ್ಮ ಸಹೋ­ದ್ಯೋಗಿ­ಗಳು ಅವರ ಅಡಿಯೇ ಕೆಲಸ ನಿರ್ವಹಿ­ಸುತ್ತಿದ್ದಾರೆ ಅವರು ದೂರಿದ್ದಾರೆ.

ಕೆಲಸದಿಂದ ವಜಾ ಮಾಡುವ ಭೀತಿ­ಯಿಂದಾಗಿ ತಾವು ರಾಜೀನಾಮೆ ಸಲ್ಲಿ­ಸಿದ್ದು, ತಮ್ಮನ್ನು ಮತ್ತೆ ಕೆಲಸಕ್ಕೆ ತೆಗೆದು­ಕೊಳ್ಳಬೇಕು ಎಂದೂ ಅವರು ಅರ್ಜಿ­ಯಲ್ಲಿ ಒತ್ತಾಯಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ­ಮೂರ್ತಿ ಆರ್‌. ಎಂ. ಲೋಧಾ, ಈಗಾ­ಗಲೇ ಪ್ರಕರ­ಣದ ವಿಚಾ­ರಣೆ ನಡೆಸುತ್ತಿರುವ ನ್ಯಾ. ಜೆ. ಎಸ್. ಖೇಹರ್‌ ಅವರ ನೇತೃತ್ವದ ಪೀಠಕ್ಕೆ ಈ ಅರ್ಜಿ ವಿಚಾರಣೆ ವಹಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT