ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ ಬಾಡಿಗೆಯೇ ₨ 2 ಕೋಟಿ

ಸಲ್ಮಾನ್‌ ಸೋದರಿ ಅರ್ಪಿತಾ ಖಾನ್‌ ವಿವಾಹ ಇಂದು
Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಕಿರಿಯ ಸಹೋದರಿ ಅರ್ಪಿತಾ ಖಾನ್‌ ವಿವಾಹ ಇಲ್ಲಿನ ಫಲಕ್‌ನುಮಾ ಪ್ಯಾಲೇಸ್‌ ಹೋಟೆಲ್‌­ನಲ್ಲಿ ಮಂಗಳ ವಾರ ವೈಭವೋಪೇತ ವಾಗಿ ನಡೆಯಲಿದೆ.

ರಾಜಕಾರಣಿ ಅನಿಲ್‌ ಶರ್ಮಾ ಅವರ ಪುತ್ರ ಆಯುಷ್‌ ಶರ್ಮಾ ಅವರೊಂದಿಗೆ ಅರ್ಪಿತಾ ವಿವಾಹ ನಡೆಯಲಿದೆ. ವಿವಾಹಕ್ಕಾಗಿ  ಇಡೀ ಹೋಟೆಲನ್ನು ಎರಡು ದಿನಗಳವರೆಗೆ ಸಲ್ಮಾನ್‌ ಕಾಯ್ದಿರಿಸಿದ್ದಾರೆ.

ಚಾರ್‌ಮಿನಾರ್‌ನಿಂದ ಐದು ಕಿ.ಮೀ. ದೂರದಲ್ಲಿರುವ ಪಂಚತಾರಾ ಫಲಕ್‌ ನುಮಾ ಪ್ಯಾಲೇಸ್‌ ಹೋಟೆಲ್‌ ತಾಜ್‌ ಸಮೂಹಕ್ಕೆ ಸೇರಿದೆ. ‘ಆಕಾಶದ ಕನ್ನಡಿ’ ಎಂದು ಉರ್ದುವಿನಲ್ಲಿ ಇದನ್ನು ಕರೆಯ ಲಾಗುತ್ತದೆ.  ವಿವಾಹಕ್ಕಾಗಿ ಹೋಟೆಲ್‌ನ 60 ಕೊಠಡಿಗಳನ್ನು  ಸಲ್ಮಾನ್‌ ಕಾಯ್ದಿರಿಸಿದ್ದಾರೆ. ಎರಡು ದಿನಗಳ ಹೋಟೆಲ್‌ ಬಾಡಿಗೆ ₨2 ಕೋಟಿ ಎನ್ನಲಾಗುತ್ತಿದೆ. ಒಂದು ದಿನಕ್ಕೆ ಪ್ರತಿ ಕೊಠಡಿಯ ಬಾಡಿಗೆ 40 ಸಾವಿರ ರೂಪಾಯಿ.

ಗಣ್ಯರಿಗೆ ಆಹ್ವಾನ: ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರನ್ನು ವಿವಾಹಕ್ಕೆ ಆಹ್ವಾನಿಸಲಾಗಿದೆ.

ವಿವಾಹದಲ್ಲಿ ಭಾಗವಹಿಸಲಿರುವ ಪ್ರಸಾಧನ ತಂಡ, ವಿವಾಹ ಆಯೋಜ ಕರು, ಊಟದ ವ್ಯವಸ್ಥಾಪಕರು, ಮೆಹಂದಿ ಹಾಕುವವರು, ಸಂಗೀತ ಗೋಷ್ಠಿ ಸಮೂಹದವರು ಮತ್ತು ಅಲಂ ಕಾರದ ತಂಡವನ್ನು ಮುಂಬೈನಿಂದ ಕರೆಸಿಕೊಳ್ಳಲಾಗಿದೆ.

ಬಾಲಿವುಡ್‌ ದಂಡು: ವಿವಾಹಕ್ಕೆ ಶಾರುಕ್‌ ಖಾನ್‌, ಅಮಿತಾಭ್ ಬಚ್ಚನ್‌, ಅಮೀರ್‌ ಖಾನ್‌, ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಸೇರಿದಂತೆ ಬಾಲಿವುಡ್‌ನ 400 ಜನ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT