ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಕರ್‌ಗಳಿಂದ ಮೊಬೈಲ್ ರಕ್ಷಣೆ ಹೀಗೆ

ತಂತ್ರೋಪನಿಷತ್ತು
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಂದು ಮೊಬೈಲ್ ಬರೀ ಸಂಭಾಷಣೆ ಸಾಧನವಾಗಿಲ್ಲ. ರಿಚಾರ್ಜ್, ಬಿಲ್ ಪಾವತಿ, ಬ್ಯಾಂಕಿಂಗ್, ಶಾಪಿಂಗ್ ಅಲ್ಲದೆ ಬಹಳಷ್ಟು ಕೆಲಸಗಳಿಗೂ ಉಪಯುಕ್ತ. ಹೀಗಾಗಿ ಖಾತೆ, ಎಟಿಎಂ/ಕ್ರೆಡಿಟ್ ಕಾರ್ಡ್ ಹೀಗೆ ಅತ್ಯಂತ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಲು ಆರಂಭಿಸಿದ್ದೇವೆ. ಇದರಿಂದ ಮೊಬೈಲ್ ಕೂಡ ಮಾಹಿತಿ ಕಳ್ಳರ (ಹ್ಯಾಕರ್‌ಗಳ) ವಕ್ರ ದೃಷ್ಟಿಗೆ ಬಿದ್ದಿದೆ. ಆದ್ದರಿಂದ ಮೊಬೈಲ್ ರಕ್ಷಣೆಗೆ ಹೆಚ್ಚು ಗಮನ ಕೊಡುವುದು ಅತ್ಯಗತ್ಯ.

ಮೊಬೈಲ್‌ನಲ್ಲಿ ಸಾಮಾಜಿಕ ತಾಣಗಳಿಗೆ  ಭೇಟಿ ನೀಡುವಾಗ, ಇ-ಮೇಲ್ ಪರಿಶೀಲಿಸುವಾಗ ಎಚ್ಚರದಿಂದಿವುದು ಒಳಿತು. ಅಪರಿಚಿತ ಲಿಂಕ್ ತೆರೆಯಬೇಡಿ. ಪರಿಚಯ ಇಲ್ಲದವರೊಂದಿಗೆ ಹರಟುವುದು, ಅಪರಿಚಿತ ಜಾಲತಾಣಗಳಿಗೆ ಭೇಟಿ ನೀಡುವುದು ಮಾಡಬೇಡಿ. ಹೀಗೆ ಮಾಡುವುದರಿಂದ ಮಾಹಿತಿ ಕಳುವಾಗುವ ಸಾಧ್ಯತೆ ಹೆಚ್ಚು. ಇಂದು ವೈಯಕ್ತಿಕ ಮಾಹಿತಿ ಕೂಡ ಮಾರಾಟದ ಸರಕು. ಹ್ಯಾಕರ್‌ಗಳಿಂದ ಮೊಬೈಲಿನಲ್ಲಿರುವ ಮಾಹಿತಿ ರಕ್ಷಿಸಲು ಕ್ಲಿಷ್ಟವಾದ ಪಾಸ್‌ವರ್ಡ್ ಅತ್ಯಗತ್ಯ. ಹೆಚ್ಚಿನ ಸುರಕ್ಷತೆಗೆ ಭದ್ರತಾ ತಂತ್ರಾಂಶಗಳನ್ನೂ ಬಳಸುವುದು ಒಳಿತು. ಅಪ್ಲಿಕೇಷನ್ ಡೌನ್ ಲೋಡ್ ಮಾಡುವಾಗ ಜನಪ್ರಿಯವೆನಿಸಿದ ಗೂಗಲ್ ಪ್ಲೇ ಸ್ಟೋರ್ ಮತ್ತು ಅಮೇಜಾನ್ ಆ್ಯಪ್ ಸ್ಟೋರ್ ಬಳಸಿ. ಗೊತ್ತಿರದ, ಅಧಿಕೃತವಲ್ಲದ ಅಪ್ಲಿಕೇಷನ್ ಸ್ಟೋರ್ ಗಳಿಂದ ಆ್ಯಪ್ ಡೌನ್ ಲೋಡ್ ಮಾಡದಿರಿ.

ಮೊಬೈಲ್ ಸೆಟ್ಟಿಂಗ್ಸ್‌ನಲ್ಲಿ Unknown Sources ರೈಟ್ ಕ್ಲಿಕ್ ಆಗಿದ್ದರೆ ಅದನ್ನು ತೆಗೆಯಿರಿ. ಇದರಿಂದಾಗಿ ನಮ್ಮ ಅನುಮತಿ ಪಡೆಯದೆ ಅನಧಿಕೃತ ಸ್ಟೋರ್‌ನಿಂದ ಡೌನ್‌ಲೋಡ್/ ಇನ್‌ ಸ್ಟಾಲ್ ಮಾಡಲಾಗದು.

ಯಾವುದೇ ಹೊಸ ಆ್ಯಪ್ ಅನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡುವಾಗ ಅದು ನಮ್ಮಿಂದ ಏನೆಲ್ಲಾ ಮಾಹಿತಿಗಳನ್ನು ಪಡೆಯುತ್ತಿದೆ ಎಂಬುದನ್ನು ಓದಿ ತಿಳಿದುಕೊಳ್ಳಿ. ಉಚಿತವಾಗಿ ಸಿಗುವ ಬಹಳಷ್ಟು ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗ ಫೋನ್‌ನಲ್ಲಿರುವ ಕಾಂಟ್ಯಾಕ್ಟ್, ಇಮೇಜ್, ವಿಡಿಯೊ ಇತ್ಯಾದಿಗಳನ್ನು ಬಳಸುವ ಬಗ್ಗೆ ಅನುಮತಿ ಕೇಳುತ್ತವೆ. ಉಚಿತ ಎಂದು ಸಿಕ್ಕಿದ್ದೆಲ್ಲವನ್ನೂ ಇನ್‌ಸ್ಟಾಲ್ ಮಾಡದಿರಿ. ಇದರಿಂದ ಮಾಹಿತಿ ಕಳುವಾಗುವ, ಮೊಬೈಲ್ ನಿಧಾನವಾಗಿ ಕಾರ್ಯ ನಿರ್ವಹಿಸುವಂತಾಗುವ, ಆಪರೇಟಿಂಗ್ ಸಿಸ್ಟಂಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಕೆಲವೊಂದು ಆ್ಯಪ್‌ಗಳು ನಾವು ಅಂತರ್ಜಾಲ ಬಳಸಲಾರಂಭಿಸು ತ್ತಿದ್ದಂತೆಯೇ ಜಾಹೀರಾತುಗಳನ್ನು ತೋರಿಸಲಾರಂಭಿ ಸುತ್ತವೆ. ಹೀಗೆ ನಮ್ಮ ಅನುಮತಿ ಇಲ್ಲದೆ ಜಾಹೀರಾತು ನೀಡಿ ಕಿರಿಕಿರಿ ಮಾಡುತ್ತವೆ. ಅಲ್ಲದೆ, ಈ ಜಾಹೀರಾತುಗಳಿಂದ ಮಾಲ್‌ವೇರ್‌ಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇಂತಹವುಗಳನ್ನು ಬಳಸದಿರುವುದೇ ಸೂಕ್ತ. ಪ್ರಮಾಣಿತ ಆ್ಯಂಟಿ ವೈರಸ್, ಸೆಕ್ಯುರಿಟಿ ಆ್ಯಪ್ ಬಳಸಿ ಮೊಬೈಲನ್ನು ಹೆಚ್ಚು ಸುರಕ್ಷಿತವಾಗಿಡಬಹುದು. ಉಚಿತ ವೈಫೈ ಸಂಪರ್ಕದ ಬಗ್ಗೆ ಎಚ್ಚರಿಕೆ ಅಗತ್ಯ. ಹ್ಯಾಕರ್‌ಗಳು ಆ ವೈಫೈ ನಿಯಂತ್ರಿಸುತ್ತಿದ್ದರೆ ದುರ್ಬಳಕೆ ಆಗಬಹುದು. ಹೀಗಾಗಿ ಬಳಕೆಗೂ ಮುನ್ನ ಅದು ಅಧಿಕೃತವೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT