ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿ–1’ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

Last Updated 11 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಾಲಾಸೋರ್‌ (ಒಡಿಶಾ) (ಪಿಟಿಐ): ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ‘ಅಗ್ನಿ–1’ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ  ಯಶಸ್ವಿಯಾಗಿ ನಡೆದಿದೆ.

ನೆಲದಿಂದ ನೆಲಕ್ಕೆ 700 ಕಿ.ಮೀ. ದೂರದವರೆಗೆ ಚಿಮ್ಮಬಲ್ಲ ಒಂದೇ ಹಂತದ ಈ ಕ್ಷಿಪಣಿಯನ್ನು ಇಲ್ಲಿಗೆ ಸುಮಾರು 100 ಕಿ.ಮೀ. ದೂರದಲ್ಲಿರುವ ವ್ಹೀಲರ್‌ ದ್ವೀಪದ ಸಮಗ್ರ ಪರೀಕ್ಷಾ ವಲಯದಲ್ಲಿರುವ (ಐಟಿಆರ್‌) ಸಂಚಾರಿ ಉಡಾವಣಾ ಸಾಧನದ ಮೂಲಕ ಗುರುವಾರ ಬೆಳಿಗ್ಗೆ 11.11ಕ್ಕೆ  ಪರೀಕ್ಷಿಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಕ್ತಾರ ರವಿ-ಕುಮಾರ್‌ ಗುಪ್ತಾ ಹೇಳಿದರು.

‘ಡಿಆರ್‌ಡಿಒ ಮಧ್ಯಮ ಶ್ರೇಣಿ  ಕ್ಷಿಪಣಿ ಅಭಿವೃದ್ಧಿ ಪಡಿಸಿದ್ದು, ಸೇನಾ ಪಡೆಗಳಿಗೆ ನಿಯಮಿತವಾಗಿ ನೀಡುವ ತರಬೇತಿ ಅಂಗವಾಗಿ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು ಸಂಪೂರ್ಣವಾಗಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT