ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿ–5’ ಕ್ಷಿಪಣಿ ಯಶಸ್ವಿ ಪ್ರಯೋಗ

Last Updated 1 ಫೆಬ್ರುವರಿ 2015, 15:20 IST
ಅಕ್ಷರ ಗಾತ್ರ

ಬಾಲಸೋರ್‌ / ಒಡಿಶಾ (ಪಿಟಿಐ): ದೇಶದ ಮೊತ್ತಮೊದಲ ರಕ್ಷಾಕವಚ ವ್ಯವಸ್ಥೆಯುಳ್ಳ ಹಾಗೂ ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ‘ಅಗ್ನಿ– ೫’ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಶನಿ­ವಾರ ಇಲ್ಲಿ ಯಶಸ್ವಿಯಾಗಿ ನಡೆಯಿತು.

೫೦೦೦ ಕಿ.ಮೀ. ದೂರದ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡುವ ಜತೆಗೆ ೧೦೦೦ಕ್ಕೂ ಹೆಚ್ಚು ಕೆ.ಜಿ. ಭಾರದ ಅಣು ಸಿಡಿತಲೆಗಳನ್ನು ಹೊತ್ತೊ­ಯ್ಯುವ ಸಾಮರ್ಥ್ಯದ ಈ ಕ್ಷಿಪಣಿ ಅಭಿವೃದ್ಧಿ­ಯೊಂದಿಗೆ ರಾಷ್ಟ್ರವು ದಾಳಿ ಪ್ರತಿರೋಧ ಸಾಮ­ರ್ಥ್ಯ­ದಲ್ಲಿ ಮತ್ತೊಂದು ಮೈಲಿಗ­ಲ್ಲಿನ ಸಾಧನೆ ಮಾಡಿದೆ.

‘ಇಲ್ಲಿನ ಸಮುದ್ರ ತೀರದ ವ್ಹೀಲರ್‌್ಸ ದ್ವೀಪದಲ್ಲಿ ರಸ್ತೆ ಮೇಲೆ ಸಂಚರಿಸಬಲ್ಲ ವಾಹನದ ಮೇಲಿನಿಂದ ಬೆಳಿಗ್ಗೆ ೮.೦೬ಕ್ಕೆ ಉಡಾಯಿಸಲಾ­ಯಿತು’ ಎಂದು ಸಮಗ್ರ ಪರೀಕ್ಷಾ ಕೇಂದ್ರದ ನಿರ್ದೇಶಕ ಎಂ.ವಿ.ಕೆ.ವಿ ಪ್ರಸಾದ್‌ ತಿಳಿಸಿದರು.

ತೆರೆದ ಮಾದರಿಯ ಕ್ಷಿಪಣಿ ಉಡಾ­ವಣೆಗೆ ಹೋಲಿಸಿದರೆ ರಕ್ಷಾಕವಚ­ದೊ­ಳಗೆ ಹುದುಗಿಸಲಾದ ಕ್ಷಿಪಣಿ ಉಡಾ­­ವಣೆಯಿಂದ ಹಲವು ಉಪ­ಯೋಗ­ಗಳಿವೆ ಎನ್ನಲಾಗಿದೆ. ಇದನ್ನು ರಸ್ತೆ ಅಥವಾ ರೈಲಿನ ಮೂಲಕ ಬೇಕೆಂದೆ­ಲ್ಲಿಗೆ ಕೊಂಡು­ಹೋಗಿ ಅಲ್ಲಿಂದ ಉಡಾಯಿಸ­ಬಹುದು, ಹೆಚ್ಚಿನ ಗೋಪ್ಯತೆ ಕಾಪಾಡಿ­ಕೊಳ್ಳ­ಬಹುದು, ನಿರ್ವಹಣಾ ವೆಚ್ಚ ಕಡಿಮೆ ಹಾಗೂ ಇದರ ಉಡಾವಣೆಯ ಪೂರ್ವಸಿದ್ಧತೆಗೆ ಕೂಡ ಹೆಚ್ಚಿನ ಸಮಯ ಬೇಕಾಗಿಲ್ಲ ಎನ್ನಲಾಗಿದೆ.

ಈ ಕ್ಷಿಪಣಿಯ ಯಶಸ್ವಿ ಪ್ರಯೋಗ­ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಅಲ್ಲದೇ ಈ ಕ್ಷಿಪಣಿಯು ದೇಶದ ಸೇನಾ ಪಡೆಗಳ ಪಾಲಿಗೆ ಅಮೂಲ್ಯ ಆಸ್ತಿ  ಆಗಲಿದೆ ಎಂದಿದ್ದಾರೆ. ಇಡೀ ಉಡಾವಣಾ ಪ್ರಕ್ರಿಯೆಗೆ ಸಾಕ್ಷಿ­ಯಾದ ವಾಯುಪಡೆ ಮುಖಸ್ಥ ಅನೂಪ್‌ ರಹಾ ಅವರು ಅಗ್ನಿ ತಂಡದ ಸಿಬ್ಬಂದಿಯನ್ನು ಅಭಿನಂದಿಸಿ­ದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆ­ಗಾರ ಅಜಿತ್‌ ಧೊಬಾಲ್‌ ಅವರು ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಲೆಫ್ಟಿನೆಂಟ್‌ ಜನರಲ್‌ ಅಮಿತ್‌ ಶರ್ಮ ಈ ಕ್ಷಣಕ್ಷೆ ಸಾಕ್ಷಿಯಾದರು.

ಸೇವೆ ಮುಗಿಸಿದ ‘ಅಗ್ನಿ ಮನುಷ್ಯ’: ಅಗ್ನಿ ಶ್ರೇಣಿಯ ಕ್ಷಿಪಣಿಗಳ ಅಭಿ­ವೃದ್ಧಿಗೆ ಸಲ್ಲಿಸಿದ ಅನನ್ಯ ಕೊಡುಗೆ­ಯಿಂದಾಗಿ ‘ಅಗ್ನಿ ಮನುಷ್ಯ’ನೆಂದೇ ಹೆಸರಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಅವಿನಾಶ್‌ ಚಂದರ್‌ ಸೇವೆ ಶನಿವಾರ ಕೊನೆಗೊಂಡಿತು. ದೇಶದ ಮೊದಲ ರಕ್ಷಾಕವಚ ವ್ಯವಸ್ಥೆ ಹೊಂದಿದ ಅಗ್ನಿ– ೫ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದ ದಿನವೇ ಅವರ ಸೇವೆ ಕೊನೆಯಾಗಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT