ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ಯಾಯದ ವಿರುದ್ಧ ಹೋರಾಡಿ’

Last Updated 15 ಸೆಪ್ಟೆಂಬರ್ 2014, 8:51 IST
ಅಕ್ಷರ ಗಾತ್ರ

ಆನೇಕಲ್‌:  ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವ ವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ನುಡಿದರು.  ಅವರು ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮಸ್ವಾಮಿ  ದೇವಾಲಯದ ಆವರಣದಲ್ಲಿ ಜಿಗಣಿ ಹೋಬಳಿ ಜಯಕರ್ನಾಟಕ ಸಂಘಟನೆಯ ವಿವಿಧ ಶಾಖೆಗಳ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ಎಲ್ಲಿ ಬಡವರಿಗೆ ಅನ್ಯಾಯವಾಗುತ್ತ ದೆಯೋ ಅಲ್ಲಿ ಅವರ ಪರವಾಗಿ ನಿಂತು ಧ್ವನಿ ಎತ್ತುವ ಮನೋಭಾವ ಚಿಕ್ಕಂದಿ ನಿಂದಲೂ ನನಗಿದೆ, ಹಾಗಾಗಿ ಹಲ ವಾರು ಸಮಸ್ಯೆಗಳಿಗೆ ಸಿಲುಕಿದರೂ ಗುಂಡಿನ ದಾಳಿಗೆ ಒಳಗಾದರೂ ಸಹ ಬಡವರ ಪರ ದನಿ ಎತ್ತುವ ಕಾರ್ಯ ದಿಂದ ದೂರ ಸರಿಯಲಿಲ್ಲ, ಸಂಘ ಟನೆಯ ಕಾರ್ಯಕರ್ತರು ಸಹ ಸೇವಾ ಮತ್ತು ಹೋರಾಟದ ಮನೋಭಾವನೆ ಯನ್ನು ಬೆಳೆಸಿಕೊಳ್ಳಬೇಕು. ಒಂದು ಸಂಘಟನೆ ಬೃಹತ್‌್ ಆಗಿ ಬೆಳೆಯ ಬೇಕಾದರೆ ಮುಖಂಡರಿಗಿಂತ ಕಾರ್ಯ ಕರ್ತ ಶ್ರಮ ಮುಖ್ಯವಾಗಿರುತ್ತದೆ. ಹಾಗಾಗಿಯೇ ಕೇವಲ 10ಮಂದಿ ಸದಸ್ಯರಿಂದ ಪ್ರಾರಂಭವಾದ ಜಯ ಕರ್ನಾಟಕ ಸಂಘಟನೆ 19 ಲಕ್ಷ ಮಂದಿ ಸದಸ್ಯರನ್ನು ಹೊಂದುವ ಹಂತಕ್ಕೆ ಬೆಳೆದಿದೆ’ ಎಂದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ ಜಯ ಕರ್ನಾಟಕ ಸಂಘಟನೆಯು ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿರುವುದು ಶ್ಲಾಘನೀಯ, ಜನಸಾಮಾನ್ಯರ ಯಾವುದೇ ಸಮಸ್ಯೆಗಳನ್ನು ಗಮನಕ್ಕೆ ತಂದರೂ ಸಹ ಅದಕ್ಕೆ ಸ್ಪಂದಿಸುವುದಾಗಿ ನುಡಿದರು.
ಆನಂದ ಸಿದ್ದಿಪೀಠಂನ ಆನಂದ ಗುರೂಜಿ ಮಾತನಾಡಿ ನೊಂದವರಿಗೆ ಪರಿಹಾರ ನೀಡುವ ಚೈತನ್ಯ ನೀಡುವ ಕಾರ್ಯದಲ್ಲಿ ಜಯಕರ್ನಾಟಕ ಸಂಘ ಟನೆ ತೊಡಗಿಕೊಂಡಿದೆ. ಸೋದರತ್ವ ಸ್ನೇಹ ಭಾವದಿಂದ ಬೆಳೆದು ಜನೋ ಪಯೋಗಿಯಾಗಿ ಬೆಳೆಯಲಿ ಎಂದರು.

ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ, ಆರೋಗ್ಯ ತಪಸಣಾ ಶಿಬಿರ, ಶಾಲಾ ಮಕ್ಕಳಿಗೆ ನೋಟ್‌ ಪುಸ್ತಕ ವಿತರಣೆ, ವೃದ್ದರಿಗೆ ಕಂಬಳಿ ವಿತರಣೆ, ಬನ್ನೇರುಘಟ್ಟ ಜ್ಞಾನಾಶ್ರಮಕ್ಕೆ ಸೌರ ವಿದ್ಯುತ್‌ ಅಳವಡಿಕೆ ಕಾರ್ಯ ಕ್ರಮಗಳನ್ನು ಕಾರ್ಯಕರ್ತರು ಹಮ್ಮಿಕೊಂಡಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಸಿ. ರಾಮಚಂದ್ರ, ಸದಸ್ಯ ಜಯರಾಮ್‌, ಮುಖಂಡರಾದ ಆರ್.ಡಿ.ರಾಜಣ್ಣ, ಎನ್.ಸುರೇಶ್‌, ಬ್ಲಾಕ್‌ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಅಚ್ಯುತರಾಜು, ಸಂಘಟನೆಯ ಮುಖಂಡರಾದ ಚೇತನ್‌, ಆನಂದ್, ನಾಗರಾಜ್‌, ರಾಜು, ಬಾಬು, ಸಾಗರ್‌ ,ರವಿ, ಸುರೇಶ್‌ ರೆಡ್ಡಿ, ವೆಂಕಟೇಶ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT