ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿ: ಗುಜರಾತ್‌ಗಿಂತ ಮಹಾರಾಷ್ಟ್ರ ಮುಂದಿದೆ’

Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರವು ಶಿಕ್ಷಣ ಮತ್ತು ಅಭಿ­ವೃದ್ಧಿ­ಯಲ್ಲಿ ಗುಜರಾತ್‌ಗಿಂತ ಮುಂದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಬಗ್ಗೆ ಏನನ್ನೇ ಮಾತನಾಡಿದರೂ ಅದಕ್ಕೆ ಮುನ್ನ ಸೂಕ್ತ ಅವಲೋಕನ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಆನಂದ ಶರ್ಮ ಹೇಳಿದ್ದಾರೆ.‌

ಗುಜರಾತ್‌ಗಿಂತ ಮಹಾರಾಷ್ಟ್ರ ಮುಂದಿ­ರಬೇಕು ಎಂಬುದು ತಮ್ಮ ಬಯಕೆ ಎಂದು ಮೋದಿ ಅವರು ಶನಿ­ವಾ­ರದ ಸಭೆಯಲ್ಲಿ ಹೇಳಿದ್ದಾರೆ. ಆದರೆ 2000ನೇ ಇಸವಿ­ಯಿಂದ 2013­ನೇ ಇಸವಿಯವರೆಗಿನ ಅಂಕಿ­ಅಂಶ­ಗಳನ್ನು ನೋಡಿ­ದರೆ ಮಹಾ­ರಾಷ್ಟ್ರ ಅಭಿವೃದ್ಧಿಯಲ್ಲಿ ಗುಜರಾತ್‌­­ಗಿಂತ ಮುಂದಿರುವುದು ಗೊತ್ತಾ­ಗು­ತ್ತದೆ. ಈ ಅವಧಿಯಲ್ಲಿ ಮಹಾ­­ರಾಷ್ಟ್ರಕ್ಕೆ ಅತ್ಯಧಿಕ ವಿದೇಶಿ ಹೂಡಿಕೆ ಹರಿ­ದು­­ಬಂದಿ­ದ್ದರೆ ಗುಜ­ರಾತ್‌ ಐದನೇ ಸ್ಥಾನ­ದಲ್ಲಿದೆ ಎಂದು ಭಾನುವಾರ ಸುದ್ದಿ­ಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಮೋದಿ ಅವರಿಗೆ ಮಹಾರಾಷ್ಟ್ರದ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ  ಜನ­ಬೆಂಬಲ ವ್ಯಕ್ತವಾಗುವ ಬಗ್ಗೆ ಅನು­ಮಾನ­­ಗ­ಳಿವೆ. ಅದಕ್ಕಾಗಿಯೇ 20 ಚುನಾ­ವಣಾ ರ್‍್ಯಾಲಿ­ಗ­ಳನ್ನು ಹಮ್ಮಿ­ಕೊಂಡಿ­ದ್ದಾರೆ ಎಂದು  ಟೀಕಿಸಿದರು. ಸ್ವಾತಂತ್ರ್ಯದ ನಂತರ  ಇದೇ ಮೊದಲ ಬಾರಿಗೆ ರಕ್ಷಣಾ ಖಾತೆಗೆ ಪ್ರತ್ಯೇಕ ಸಚಿ­ವರಿಲ್ಲ. ಹಣ­ಕಾಸು ಸಚಿ­­ವ­ರಿ­ಗೇ ರಕ್ಷಣಾ ಖಾತೆ­ಯನ್ನೂ ಹೆಚ್ಚುವ­ರಿ­­ಯಾ­ಗಿ ವಹಿ­ಸ­­ಲಾ­­ಗಿದ್ದು ಅವರೂ ಅನಾ­­­ರೋಗ್ಯಕ್ಕೆ ಒಳಗಾಗಿ­ದ್ದಾ­ರೆ­ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT