ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಶಾಂತಿಗೆ ತಾಲಿಬಾನ್, ಭಾರತ ಪ್ರೋತ್ಸಾಹ’

ಭಾರತದ ವಿರುದ್ಧ ಪಾಕ್‌ ಗಂಭೀರ ಆರೋಪ
Last Updated 27 ಮೇ 2015, 10:24 IST
ಅಕ್ಷರ ಗಾತ್ರ

ಇಸ್ಲಾಮಾಬಾದ್(ಪಿಟಿಐ): ದೇಶದಲ್ಲಿ ಪ್ರಕ್ಷುಬ್ಧತೆಯನ್ನು ತಾಲಿಬಾನ್‌ ಹಾಗೂ ಭಾರತದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಪ್ರೇರೆಪಿಸುತ್ತಿವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮುಹಮ್ಮದ್ ಆಸೀಫ್ ಅವರು ಬುಧವಾರ ಆರೋಪಿಸಿದ್ದಾರೆ.

ಈ ಹೇಳಿಕೆಯನ್ನು ಪಾಕಿಸ್ತಾನ ರೇಡಿಯೊ ವರದಿ ಮಾಡಿದೆ. ‘ಭಯೋತ್ಪಾದಕರನ್ನು ಭಯೋತ್ಪಾದಕರಿಂದಲೇ ಹಿಮ್ಮೆಟಿಸಬೇಕು’ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ ಕೆಲ ದಿನಗಳ ನಂತರ ಪಾಕ್‌ ರಕ್ಷಣಾ ಸಚಿವರು ಹೀಗೆ ಹೇಳಿದ್ದಾರೆ.‌

ಪಾಕಿಸ್ತಾನದಲ್ಲಿ ಅಶಾಂತಿ ಪ್ರೋತ್ಸಾಹಿಸಲು ಭಾರತದ ಗುಪ್ತಚರ ಜಾಲ ಹಾಗೂ ಭಯೋತ್ಪಾದಕರು ಪರಸ್ಪರ ಕೈಜೋಡಿಸಿದ್ದಾರೆ ಎಂದು ಆಸೀಫ್‌ ಆರೋಪಿಸಿದ್ದಾರೆ.

ನಿಷೇಧಿತ ಉಗ್ರ ಸಂಘಟನೆ ‌ತೆಹ್ರಿಕ್‌–ಎ–ತಾಲಿಬಾನ್‌, ಭಾರತದ ಪರವಾಗಿ ಪಾಕಿಸ್ತಾನದ ವಿರುದ್ಧ ಪ್ರಾತಿನಿಧಿಕ ಯುದ್ಧ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT