ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಶ್ಲೀಲ ವೆಬ್‌ಸೈಟ್‌ಗೆ ಸದ್ಯಕ್ಕಿಲ್ಲ ನಿಷೇಧ’

ಪುನರ್‌ ಪರಿಶೀಲನೆಗೆ ಮುಂದಾದ ಸರ್ಕಾರ
Last Updated 4 ಆಗಸ್ಟ್ 2015, 13:48 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಾಮಪ್ರಚೋದಕ ಮತ್ತು ಅಶ್ಲೀಲ ಅಂತರ್ಜಾಲ ತಾಣಗಳನ್ನು ಸ್ಥಗಿತಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ  ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಪುನರ್‌ ಪರಿಶೀಲಿಸಲು ಸರ್ಕಾರ ಮುಂದಾಗಿದೆ.

‘ಈ ಪ್ರಸ್ತಾವವನ್ನು ಪುನರ್‌ ಪರಿಶೀಲಿಸಿದ ನಂತರವೇ, ಇಂತಹ ತಾಣಗಳನ್ನು ಸ್ಥಗಿತಗೊಳಿಸಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ದೂರಸಂಪರ್ಕ ಸಚಿವ ರವಿ ಶಂಕರ್‌ ಪ್ರಸಾದ್‌ ಮಂಗಳವಾರ  ಇಲ್ಲಿ ಸ್ಪಷ್ಟಪಡಿಸಿದರು.

ಸಾಮಾಜಿಕ ತಾಣಗಳಲ್ಲಿ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ರವಿ ಶಂಕರ್‌ ಪ್ರಸಾದ್‌ ಐ.ಟಿ ಕಾರ್ಯದರ್ಶಿ ಆರ್‌.ಎಸ್‌ ಶರ್ಮಾ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿಂಕಿ ಆನಂದ್‌ ಜತೆ ಚರ್ಚೆ ನಡೆಸಿದರು. ಬಳಿಕ ಇದನ್ನು ಪುನರ್‌ ವಿಮರ್ಶೆಗೆ ಒಳಪಡಿಸಲಾಗುವುದು ಎಂದರು.

ಕಾಮಪ್ರಚೋದಕ ವಿಷಯಗಳನ್ನು ಪ್ರಕಟಿಸಲಾಗುತ್ತದೆ ಎಂಬ ಕಾರಣಕ್ಕೆ ಒಟ್ಟು  857 ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವಂತೆ ದೂರವಾಣಿ ಇಲಾಖೆ, ಇಂಟರ್‌ನೆಟ್‌ ಸೇವಾ ಸಂಸ್ಥೆಗಳಿಗೆ (ಐಎಸ್‌ಪಿಎಸ್‌) ಸೂಚಿಸಿತ್ತು. , ಶನಿವಾರ ರಾತ್ರಿಯಿಂದಲೇ ಈ ಜಾಲತಾಣಗಳ ಸಂಪರ್ಕ ಕಡಿತಗೊಂಡಿತ್ತು.

ಆದರೆ, ಮಂಗಳವಾರ ಇದಕ್ಕೆ ಸ್ಪಷ್ಟನೆ ನೀಡಿದ ರವಿಶಂಕರ್‌ ಪ್ರಸಾದ್‌, 857 ವೆಬ್‌ಸೈಟ್‌ಗಳಲ್ಲಿ ಎಲ್ಲವೂ ಕಾಮ ಪ್ರಚೋದಕ ವಿಷಯಗಳನ್ನು ಪ್ರಕಟಿಸುತ್ತಿಲ್ಲ. ಕೆಲವು ವೆಬ್‌ಸೈಟ್‌ಗಳು ಜೋಕ್ಸ್‌ಗಳು ಮತ್ತು ಹಾಸ್ಯಕ್ಕೆ ಸೀಮಿತವಾಗಿವೆ. ಇಂತಹ ವೆಬ್‌ಸೈಟ್‌ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಇನ್ನುಳಿದ ವೆಬ್‌ಸೈಟ್‌ಗಳ ಕಂಟೆಂಟ್‌ ಪರಿಶೀಲಿಸಿದ ನಂತರ, ನಿಷೇಧದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಇಂಟರ್‌ನೆಟ್‌ ಸೆನ್ಸಾರ್‌ಗೆ ಮುಂದಾಗಿರುವ ಕೇಂದ್ರದ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ  ಟೀಕೆಗಳು ವ್ಯಕ್ತವಾಗಿದ್ದವು.  ಚಿತ್ರ ನಿರ್ದೇಶಕ ರಾಂ ಗೋಪಾಲ ವರ್ಮಾ, ಲೇಖಕ ಚೇತನ್‌ ಭಗತ್‌ ಸೇರಿದಂತೆ ಅನೇಕರು ಸರ್ಕಾರದ ಕ್ರಮವನ್ನು ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT