ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ತಿತ್ವ’ ಟೀಸರ್ ಬಿಡುಗಡೆ

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಹೈಫೈ ಅತಿಥಿಗಳು, ಸುಂದರ ರೂಪದರ್ಶಿಗಳು ಮತ್ತು ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ಭಾಗವಹಿಸಿದ್ದ  ಝೂಮ್  ಲೈಫ್‌ಸ್ಟೈಲ್ ಮ್ಯಾಗಝಿನ್ ರೀಲಾಂಚ್ ಕಾರ್ಯಕ್ರಮದಲ್ಲಿ ಇನ್ನೇನು ತೆರೆಗೆ ಬರಲು ಸಿದ್ದವಿರುವ ‘ಅಸ್ತಿತ್ವ’ ಸಿನಿಮಾದ ಟೀಸರ್ ಕೂಡ ಬಿಡುಗಡೆ ಮಾಡಲಾಯಿತು.

ಸ್ಯಾನ್ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕ ಬಿ.ಎಸ್.ವಿಶ್ವ ಕಾರ್ಯಪ್ಪ ಅವರ ಸಾರಥ್ಯದಲ್ಲಿ ರೂಪುಗೊಂಡಿರುವ ಈ ಸಿನಿಮಾದ ಟ್ರೈಲರ್ ಹಾಗೂ ಝೂಮ್ ಲೈಫ್ ಸ್ಟೈಲ್ ಮ್ಯಾಗಜೀನ್ ಅನ್ನು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಎನ್.ಮುತ್ತಪ್ಪ ರೈ  ಬಿಡುಗಡೆಗೊಳಿಸಿದರು. ಈ ಸಮಯದಲ್ಲಿ  ಸಂಘಟನೆಯ ರಾಜ್ಯ ಸಲಹೆಗಾರ ಬಿ.ಗುಣರಂಜನ್ ಶೆಟ್ಟಿ, ಸ್ಯಾಂಡಲ್‌ವುಡ್ ತಾರೆ ರಾಗಿಣಿ ದ್ವಿವೇದಿ, ‘ಅಸ್ತಿತ್ವ’ ಚಿತ್ರದ ನಾಯಕ ಯುವರಾಜ್, ನಿರ್ದೇಶಕ ನೂತನ್ ಉಮೇಶ್ ಮತ್ತಿತರ ಗಣ್ಯರು ಹಾಜರಿದ್ದರು.

ಮಾಸ್ಟರ್ ನಿಖಿಲ್ ಅವರ ಅದ್ಭುತ ಡ್ರಮ್ಸ್ ವಾದನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ನೃತ್ಯಪಟುಗಳ ಮೈನವಿರೇಳಿಸುವ ಡಾನ್ಸ್ ಪ್ರದರ್ಶನದಿಂದ ಮತ್ತಷ್ಟು ರಂಗು ಪಡೆದುಕೊಂಡಿತು. ನಂತರ ನಡೆದ ಫ್ಯಾಷನ್‌ ಶೋನಲ್ಲಿ ಹಾಟ್ ಮಾಡೆಲ್‌ಗಳು ರ್‌್ಯಾಂಪ್ ವಾಕ್ ಮಾಡಿ ನೆರೆದಿದ್ದವರ ಕಣ್ಮನ ಸೆಳೆದರು. ಸ್ಯಾಂಡಲ್‌ವುಡ್ ಹಾಟ್ ಗರ್ಲ್ ರಾಗಿಣಿ ದ್ವಿವೇದಿ ರ್‌್ಯಾಂಪ್ ವಾಕ್ ಮಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಬಿಗ್‌ಬಾಸ್ ಸೀಸನ್‌ 3ನಲ್ಲಿ ಭಾಗವಹಿಸಿದ್ದ ರೆಹಮಾನ್, ಮಾಸ್ಟರ್ ಆನಂದ್, ಅಯ್ಯಪ್ಪ, ನೇಹಾ, ಜಯಶ್ರೀ ಸೆಲೆಬ್ರಿಟಿ ಗೆಸ್ಟ್‌ಗಳಾಗಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT