ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಂಕಾರ ತ್ಯಾಗ ಉನ್ನತಿಗೆ ಸಾಧನ’

Last Updated 23 ಮೇ 2015, 9:19 IST
ಅಕ್ಷರ ಗಾತ್ರ

ಸವಣೂರ: ‘ತಾನು ಭಗವಂತನ ದಾಸ ಎಂಬ ಪ್ರಜ್ಞೆ ಭಕ್ತಿಯ ಲಕ್ಷಣವಾಗಿದ್ದು, ವಚನಗಳ ಬಗ್ಗೆ ಇರುವ ಬದ್ಧತೆ ಶಿವಯೋಗಿಗಳನ್ನಾಗಿಸುತ್ತದೆ’ ಎಂದು ಧಾರವಾಡ ಮುರುಘಾಮಠದ ಶ್ರೀಗ ಳಾದ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಸವಣೂರಿನ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಜರುಗಿದ ಧಾರವಾಡ ಮುರುಘಾಮಠದ ಶ್ರೀ ಮಹಾಂತ ಅಪ್ಪಗಳ ಶತಮಾ ನೋತ್ಸವ ಹಾಗೂ 119ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು. 

ಅಹಂಕಾರ ತ್ಯಾಗ ಉನ್ನತಿಗೆ ಸಾಧನವಾಗುತ್ತದೆ. ಮುಕ್ತಿಗೆ ಮಾರ್ಗವಾ ಗುತ್ತದೆ. ಕಿಂಕರತ್ವದ ಅರಿವು, ಹಣದ ಬಗ್ಗೆ ನಿರ್ಮೋಹ, ಅಂತರಂಗ ದೊಂದಿಗೆ ಬಹಿರಂಗದ ಶುದ್ಧಿ, ನಿರಂತರವಾದ ಗುರುಸೇವೆ ಮೊದಲಾದ ಗುಣಗಳು ಮಹಾಂತಪ್ಪರನ್ನು ಉನ್ನತವಾದ ಸ್ಥಾನಕ್ಕೆ ಕಾರಣ ಎಂದು ಗುರುಸ್ಮರಣೆ ಕೈಗೊಂಡರು. 

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ಕ್ಷೇತ್ರಕ್ಕೆ ಮಹಾಂತಪ್ಪ ಸ್ವಾಮೀಜಿ ಕೊಡುಗೆಯನ್ನು ವಿವರಿಸಿದ ಮಲ್ಲಿಕಾರ್ಜುನ ಸ್ವಾಮೀಜಿ, ಹಲವಾರು ಮಹಿಮೆಗಳು ಹಾಗೂ ತ್ಯಾಗದ ಪ್ರಸಂಗಗಳನ್ನು ವಿವರಿಸಿದರು.

ಬಸವ ಪುರಾಣದ ಮುದ್ರಣ ಸೇರಿದಂತೆ ಶರಣ ಸಾಹಿತ್ಯದ ಪ್ರಕಟಣೆ, ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಮಾಡುವ ಮೂಲಕ ಉನ್ನತವಾದ ಕೊಡುಗೆಯನ್ನು ಮಹಾಂತಪ್ಪ ಸ್ವಾಮೀಜಿ ಸಮಾಜಕ್ಕೆ ನೀಡಿದ್ದಾರೆ.  ನಿವೃತ್ತ ಪ್ರಾಚಾರ್ಯ ವೈ.ವಿ ಯತ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ವಿಭಾಗದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ 80 ರಷ್ಟು ಅಂಕ ಪಡೆದ ವಿಧ್ಯಾರ್ಥಿನಿ ಕಾವ್ಯ ಶಂಭುಲಿಂಗಪ್ಪ ತಿಳವಳ್ಳಿ ಅವರನ್ನು ಶ್ರೀಮಠದ ವತಿಯಿಂದ ಗೌರವಿಸಲಾಯಿತು.  ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಸಂದೇಶ ನೀಡಿದರು.

ಮುಖಂಡರಾದ ಮೋಹನ ಮೆಣಸಿನಕಾಯಿ, ಚಂದ್ರಶೇಖರ ಬೆಣ್ಣಿ, ಸುಭಾಸ ಗಡೆಪ್ಪನವರ, ಮಹೇಶ ಸಾಲಿಮಠ ಅಕ್ಕನ ಬಳಗದ ಪದಾಧಿಕಾರಿಗಳು ಸೇರಿದಂತೆ ನಗರದ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು. ಡಿ.ಎಫ್. ಬಿಂದಲಗಿ, ಪಾಲಕ್ಷಯ್ಯ ಸಾಲಿಮಠ ಕಾರ್ಯಕ್ರಮ ನಿರ್ವಹಿಸಿದರು.

ಮುಖ್ಯಾಂಶಗಳು
* ಮಹಾಂತ ಅಪ್ಪಗಳ ಶತಮಾನೋತ್ಸವ ಸಂಭ್ರಮ
*ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಸಲಹೆ
*ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಸನ್ಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT