ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತ್ಮಹತ್ಯೆಗೆ ಯತ್ನಿಸಿದವರಿಗೆ ಶಿಕ್ಷೆ ಸರಿಯಲ್ಲ’

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕತುವಾ (ಜಮ್ಮು  ಕಾಶ್ಮೀರ) (ಪಿಟಿಐ): ಆತ್ಮಹತ್ಯೆ ಪ್ರಯತ್ನವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ 309ನೇ ಕಲಂ ರದ್ದುಪಡಿಸುವ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ತಮ್ಮ ಜೀವನವನ್ನು ಕೊನೆ ಗೊಳಿಸುವ ಅತಿರೇಕದ ನಿರ್ಧಾರ ಕೈಗೊಂಡವರಿಗೆ ಆಪ್ತ ಸಮಾ ಲೋಚನೆ ನೀಡಬೇಕೇ ಹೊರತು ಶಿಕ್ಷೆಯನ್ನಲ್ಲ’ ಎಂದು ಹೇಳಿದ್ದಾರೆ.

ಇಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣಾ ರ್‌್ಯಾಲಿಯನ್ನು ಉದ್ದೇ ಶಿಸಿ ಮಾತನಾಡಿದ ಅವರು, ‘ವ್ಯಕ್ತಿ ಯೊಬ್ಬ ಆತ್ಮಹತ್ಯೆಗೆ ಏಕೆ ಪ್ರಯತ್ನಿಸು ತ್ತಾನೆ? ಅಂತಹವರಿಗೆ ಶಿಕ್ಷೆ ನೀಡು ವುದಲ್ಲ. ಬದಲಿಗೆ ಸಮಾಲೋಚನೆ ಮತ್ತು ಅನುಕಂಪದ ಅವಶ್ಯಕತೆ ಯಿರುತ್ತದೆ’ ಎಂದರು.

‘ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣಗಳೇನು ಎಂಬುದನ್ನು ಅರ್ಥ­ಮಾಡಿ­ಕೊಳ್ಳಬೇಕು. ವ್ಯಕ್ತಿಯ ತಂದೆ ತಾಯಿ,  ಸೋದರ–ಸೋದರಿಯರು ಆತ್ಮಹತ್ಯೆ ತಪ್ಪು ನಿರ್ಧಾರ ಎಂದು ಮನವರಿಕೆ ಮಾಡಿಕೊಡಬೇಕು’ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT