ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಟ್‌ ಆಫ್‌ ಲಿವಿಂಗ್‌’ ವಿರುದ್ಧ ಮಹಿಳೆ ದೂರು

Last Updated 30 ಅಕ್ಟೋಬರ್ 2014, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್ಟ್‌ ಆಫ್‌ ಲಿವಿಂಗ್‌’ ಆಶ್ರಮದವರು ಬೆಂಗಳೂರು ದಕ್ಷಿಣ ತಾಲ್ಲೂಕಿನ ಅಗರ ಗ್ರಾಮದಲ್ಲಿ ನಮ್ಮ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ  ಜಮೀ­ನನ್ನು ಹಿಂತಿರುಗಿಸಬೇಕು’ ಎಂದು ಜಮೀನಿನ ಮಾಲೀಕರಾದ ಆರತಿ ಕೃಷ್ಣ ಒತ್ತಾಯಿಸಿದರು.

ಈ ಬಗ್ಗೆ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅಕ್ರಮ ಒತ್ತುವರಿಗೆ ಸಂಬಂಧಿಸಿದ ದಾಖಲೆ­ಗಳನ್ನು ಬಿಡುಗಡೆ ಮಾಡಿದರು.
‘ಹೈಕೋರ್ಟ್‌ ಆದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಅ.20 ಮತ್ತು 21 ರಂದು ಜಮೀನಿನ ಸರ್ವೆ ಸಡೆಸಿದ್ದಾರೆ. ಆಗ ಆಶ್ರಮ­ದವರು 11 ಎಕರೆ ಜಮೀನಿನ ಪೈಕಿ  4.37 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟಿದೆ’ ಎಂದು ಅವರು ತಿಳಿಸಿದರು.

‘ಆರ್ಟ್ ಆಫ್ ಲಿವಿಂಗ್  ಆಶ್ರಮ­ದ­ವರು ಸರ್ವೆ ನಂ.71.2ಎ ನಲ್ಲಿ ಅಕ್ರಮ­ವಾಗಿ ಹೆಲಿಪ್ಯಾಡ್, 300 ಹವಾನಿ­ಯಂ­ತ್ರಿತ ಕೊಠಡಿ ಹಾಗೂ ಕ್ರೀಡಾಂಗ­ಣ­ವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ಆರೋಪಿಸಿದರು. ‘ಶ್ರೀ ಶ್ರೀ ರವಿಶಂಕರ ಸ್ವಾಮೀಜಿ ಅವರು ನಿರ್ಮಿಸಿದ್ದ ಮೀನಾಕ್ಷಿ ಧ್ಯಾನ ಮಂದಿರಕ್ಕೆ ಭಕ್ತರ ಓಡಾಟಕ್ಕೆ ದಾರಿ ಮಾಡಲು ಮೂರು ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, ಅವರು ಇಡೀ ಜಮೀನನ್ನೇ ಒತ್ತುವರಿ ಮಾಡಿ­­ಕೊಂಡಿದ್ದಾರೆ’ ಎಂದು  ದೂರಿದರು.

‘ಈ ಕುರಿತು 2005 ಹಾಗೂ 2006 ರಲ್ಲಿ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ನಾವು ಅಮೆರಿಕದಲ್ಲಿದ್ದ ಕಾರಣ ಅವುಗಳನ್ನು ಮುಂದುವರೆ­ಸಲು ಸಾಧ್ಯವಾಗಲಿಲ್ಲ. ಈ ಅವಕಾಶ­ವನ್ನು ಪಡೆದು ರವಿಶಂಕರ್‌ ಅವರು ನಮ್ಮ ಜಮೀನನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

ತಹಶೀಲ್ದಾರ್‌ಗೆ ಮನವಿ: ‘ಆಶ್ರಮ­ದವರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಿ, ಜಮೀನನ್ನು ನಮಗೆ ವಾಪಸ್‌ ಕೊಡಿಸಬೇಕು. ಆಶ್ರಮದ ಸಿಬ್ಬಂದಿ­ಯಿಂದ ನನಗೆ ಬೆದರಿಕೆ ಇದೆ. ನನಗೆ ಸೂಕ್ತ ರಕ್ಷಣೆ ಒದಗಿಸಿಕೊ­ಡಬೇಕು’ ಎಂದು ಆರತಿ ಕೃಷ್ಣ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಅವರಿಗೆ ಗುರುವಾರ ಸಂಜೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT