ನಾಡಿ, ‘ದೈನಂದಿನ ಬಳಕೆಯ ಅಹಾರ ಪದಾರ್ಥಗಳಲ್ಲಿ ಇರುವ ವಿಷಕಾರಕ ಅಂಶಗಳು ಮಾನವ ಆರೋಗ್ಯಕ್ಕೆ ಮಾರಕವಾಗಿವೆ. ಈ ಬಗ್ಗೆ ಕಾರ್ಯಾಗಾರ
ದಲ್ಲಿ ಚರ್ಚೆ ನಡೆಯಬೇಕು’ ಎಂದರು.
ಪಶು ವೈದ್ಯಕೀಯ ವಿದ್ಯಾಲಯದ ಕುಲಸಚಿವ ಡಾ.ಎಚ್.ಎಂ.ಜಯಪ್ರಕಾಶ ಮಾತನಾಡಿ, ‘ಹೈನು ಉತ್ಪನ್ನಗಳಲ್ಲಿ ವಿವಿಧ ವಿಷಕಾರಕಗಳ ಅಂಶಗಳಿದ್ದು, ಇವು ಮಾನವ ಆರೋಗ್ಯಕ್ಕೆ ಮಾರಕವಾಗಿವೆ’ ಎಂದು ಹೇಳಿದರು.
ಪಶು ವೈದ್ಯಕೀಯ ವಿದ್ಯಾಲಯದ ಡೀನ್ ಡಾ.ಎಸ್.ಯತಿರಾಜ್ ಮಾತನಾಡಿ, ‘ಪ್ರಾಣಿಜನ್ಯ ವಸ್ತುಗಳು ಮತ್ತು ಶೇಖರಿಸಿಡುವ ಅಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶಗಳು ಇರುವ ಸಾಧ್ಯತೆ ಇದೆ. ಯಾವ ಪದಾರ್ಥದಲ್ಲಿ ಎಷ್ಟು ವಿಷವಿದೆ ಎಂಬುದನ್ನು ಪತ್ತೆಹಚ್ಚಿ ಅದರ ವಿಶ್ಲೇಷಣೆ ಮಾಡಬೇಕಿದೆ’ ಎಂದು ಅವರು ಹೇಳಿದರು.