ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಜೀವನಕ್ಕೆ ಅಂತರಂಗದ ಶಿಕ್ಷಣ ಅಗತ್ಯ’

Last Updated 19 ಏಪ್ರಿಲ್ 2014, 20:04 IST
ಅಕ್ಷರ ಗಾತ್ರ

ಯಲಹಂಕ: ‘ಆಧುನಿಕ ತಂತ್ರಜ್ಞಾನದ ವಿವಿಧ ಮೂಲಗಳಿಂದ ಮನುಷ್ಯ ಹೆಚ್ಚಿನ ಸಂಪಾದನೆಯ ಜೊತೆಗೆ ತನಗೆ ಅಗತ್ಯವಿರುವ ಎಲ್ಲ ಸೌಲಭ್ಯ ಗಳನ್ನು ಪಡೆಯುತ್ತಿದ್ದರೂ ಉತ್ತಮ ಜೀವನ­ವನ್ನು ನಡೆಸಲು ಬೇಕಾದ ಅಂತರಂಗ ಶಿಕ್ಷಣ ದೊರಕುತ್ತಿಲ್ಲ ಎಂದು ಕರ್ನಾ­ಟಕ ಲೋಕಾಯುಕ್ತದ (ಜಾಗೃತದಳ) ಮಾಜಿ ನಿರ್ದೇಶಕ ಡಿ. ಎನ್‌.ಮುನಿ ಕೃಷ್ಣ ವಿಷಾದಿಸಿದರು.

ಅಮೃತಹಳ್ಳಿ ಗೋವಿಂದಪ್ಪ ಬಡಾ­ವ­ಣೆಯ ಶ್ರೀರಾಮ ದೇವಾಲಯದಲ್ಲಿ  ಆರನೇ ವರ್ಷದ ಶ್ರೀರಾಮನವಮಿ ಮಹೋತ್ಸವದ ಅಂಗವಾಗಿ  ಸಂಗೀತ, ಸಾಹಿತ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವಿ ದ್ವಾಂಸರಿಗಾಗಿ ಆಯೋಜಿಸಿದ್ದ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಮುಖಾಂತರ ಅಂತರಂಗ ಶಿಕ್ಷಣ ದೊರಕಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ  ಕ್ಷೇತ್ರಗಳ ಬೆಳ ವಣಿಗೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

ವಿದುಷಿ  ಕಮಲಾ ವೈದ್ಯ ನಾಥನ್‌, ವಿದ್ವಾನ್‌ಗಳಾದ ಎ.ಆರ್‌.­ಕೃಷ್ಣ­ಮೂರ್ತಿ, ಸಿ.ಚಲುವ­ರಾಜ್‌, ರಾಜಾ­ರಾವ್‌, ಜಯರಾಮರಾವ್‌, ಕವಿ ಬಿ.­ಆರ್‌.­ಲಕ್ಷ್ಮಣರಾವ್‌ ಅವರನ್ನು ಸನ್ಮಾ­ನಿ­ಸಲಾಯಿತು. ಸಂಗೀತ ವಿದ್ವಾನ್‌ ಚಿಂತಲಪಲ್ಲಿ ಡಾ.ಕೆ.­ರಮೇಶ್‌, ಮೃದಂಗ ವಿದ್ವಾನ್‌ ಟಿ.­ಎಸ್‌.­ಚಂದ್ರ­ಶೇಖರ್‌, ಗಮಕ ವಿದ್ವಾನ್‌ ಜಯ­ರಾಮರಾವ್‌,  ಅಮ್ಮ ಫೌಂಡೇಶನ್‌ ಹೆಲ್ಪ್ ಅಂಡ್‌ ಗ್ರೋ ಸಂಸ್ಥೆಯ ಅಧ್ಯಕ್ಷ ವಿ.ಕೆ.ರೋಹಿತ್‌ ಉಪಸ್ಥಿತಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT