ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉರ್ದು ಒಂದು ಭಾಷೆಯಾಗಿ ಕಲಿಸಲಿ’

Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

‘ಉರ್ದು ಸಾಕು, ಕನ್ನಡ ಬೇಕು’ (ಪ್ರ.ವಾ. ಜುಲೈ 17) ಎಂದು ಮುಸ್ಲಿಂ ಸಮುದಾಯದ ಶಾಸಕರು, ಪ್ರಾಥಮಿಕ ಶಿಕ್ಷಣ ಸಚಿವರಿಗೆ ಮನವಿ ಮಾಡಿರುವುದು ಪ್ರಸಕ್ತ ಸನ್ನಿವೇಶಕ್ಕೆ ಸರಿ ಯಾಗಿಯೇ ಇದೆ. ಆದರೆ ಉರ್ದು ಭಾಷೆಯನ್ನು ಉಳಿಸಲು 1 ರಿಂದ 5ನೇ ತರಗತಿಯವರೆಗೆ ಸರಳ ಭಾಷೆಯಲ್ಲಿ ಒಂದು ಉರ್ದು ಉಪ–ಪಠ್ಯ ಕಲಿಸುವುದು ಉತ್ತಮ.

ಒಂದು ಸಮುದಾಯದ ಮಕ್ಕಳನ್ನು ಪ್ರತ್ಯೇಕವಾಗಿ ಕಾಣುವಂತಹ ವಾತಾವರಣ ತಪ್ಪಿಸಲು ಶಾಸಕರು ತೆಗೆದುಕೊಂಡ ತೀರ್ಮಾನ ಮೆಚ್ಚಬೇಕಾದ್ದು. ಬಹಳಷ್ಟು ಕಡೆ 1 ರಿಂದ 7ನೇ ತರಗತಿಯವರೆಗೆ ಉರ್ದು ಕಲಿತ ಮಕ್ಕಳಿಗೆ 8 ರಿಂದ ಕಲಿಯಲು ಪ್ರೌಢಶಾಲೆಗಳೇ ಇಲ್ಲ. ಇದರಿಂದ ಭಾಷೆಯ ತೊಡಕಿನಿಂದ ವಿದ್ಯಾರ್ಥಿಯು ಹತಾಶನಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ.
–ದಸ್ತಗೀರ್‌ಸಾಬ್‌, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT